Hindi Translationआइए बहनों, चलिए वटवृक्ष की ओर-
क्या तुम्हें सीप के दाँत काटेंगे?
तुम्हें रंगे हुए रूप भयभीत करेंगे?
मम कूडलसंगमदेव को छोड
तुम्हें फूटनेवाले परदैव अभीष्ट हुए?
Translated by: Banakara K Gowdappa
English Translation Come, sisters, go to the banyan-tree!
Do they bite, those teeth made of shells?
Do covered effiges make you afraid?
Did other gods
Than our Lord Kūḍala Saṅgama
Allure your hearts- those gods
That suddenly crack and go?
Translated by: L M A Menezes, S M Angadi
Tamil Translationதமக்கையரே வாரீர், ஆலமரத்திடம் செல்வீர்
உங்களைச் சிப்பியின் பற்கள் கடிக்குமோ?
அச்சுறுத்துமோ உம்முடைய ஒப்பனை வடிவங்கள்
நம் கூடல சங்கம தேவனின்றி நெட்டுயிர்த்து,
சிதறுண்ட மனமுடைய கடவுளரால் மனதிற்குள் வரவியலுமோ?
Translated by: Smt. Kalyani Venkataraman, Chennai
Telugu Translationరండో అక్కలారా; మఱ్ఱికడ కేగుచుంటిరే!
కొఱుకువడునే మీపంటి చిప్పలు,
తఱగుపడునే మీ మెఱుగు రూపములు?
మా కూడల సంగమదేవుడు గాక పరదైవములు
మనసుకు వచ్చునే పట్టనివిరుగు దైవములు.
Translated by: Dr. Badala Ramaiah
ಕನ್ನಡ ವ್ಯಾಖ್ಯಾನಹಾಳು ಮೊರಡಿಗಳಲ್ಲಿ, ಊರ ದಾರಿಗಳಲ್ಲಿ, ಕೆರೆಬಾವಿಗಳಲ್ಲಿ, ಹಿರಿಯಾಲದ ಮರದಲ್ಲಿ ವಾಸಮಾಡಿಕೊಂಡಿರುವ ಮಾರಯ್ಯ ಬೀರಯ್ಯ ಮುಂತಾದ ಕ್ರೂರದೇವತೆಗಳ ಬಳಿ-ಪೂಜಿಸಲೆಂದೇ ಆಗಲಿ-ಹೋಗಲು ಯಾರಿಗಾದರೂ ಭಯವೇ ! ಹೆಂಗಸರು ಮಕ್ಕಳೆಂದ ಮೇಲೆ ಅವರಿಗೆ ಭಯವಿನ್ನೂ ಅಧಿಕವೇ ! ಊರ ಹೊರಗೆ ಭಯಂಕರವಾಗಿ ಹಬ್ಬಿದ ಆಲದ ಮರದ ಕೆಳಗೆ ನಡೆಯುವ ಇಂಥ ಯಾವುದೋ ಪೂಜಾಸಂದರ್ಭಕ್ಕೆ ಹಾಜರಾಗಲು ಅಳುಕಿ ಹಿಂಜರಿಯುತ್ತಿದ್ದ ಹೆಂಗಸರನ್ನು ಕಂಡು ಬಸವಣ್ಣನವರು-ಅವರೊಡನೆ ಗಂಭೀರವಾದ ಇಂಗಿತದೊಡನೆಯೇ ಆದರೂ ಸರಸವಾಗಿ ಮಾತು ಬೆಳಸುತ್ತಿರುವಂತಿದೆ :
ಬನ್ನಿ ಅಕ್ಕಂದಿರೇ ಬನ್ನಿ-ಯಾಕೆ ದಿಗಿಲುಗೊಂಡು ಹಿಮ್ಮೆಟ್ಟುತ್ತಿದ್ದೀರಿ? ನಡೆಯಿರಿ ಆಲದ ಮರದ ಬಳಿಗೆ. ಆ ಮರದಡಿಯ ನಿಮ್ಮ ವ್ಯಂತರದೇವನ ಶಂಖದ ಹಲ್ಲುಗಳು ನಿಮ್ಮನ್ನು ಕಚ್ಚುವವೇನು? ಅವನ ವರ್ಣರಂಜಿತರೂಪ ನಿಮ್ಮನ್ನು ಹೆದರಿಸುವುದೇನು? ಅಂಥ ದೈವಗಳಿಗೆ ನೀವು-ಶಿವಶಂಕರನನ್ನು ಬಿಟ್ಟು-ಹೇಗಾದರೂ ಒಲಿದಿರೋ ! ಮೆತ್ತದೆ ಬಿಟ್ಟರೆ ಬಿರುಕುಬಿಡುವ ಇಂಥ ದುರ್ದೈವಗಳಿಗೆ ನೀವು ಹೇಗಾದರೂ ಒಲಿದಿರೋ ! ಎನ್ನುತ್ತಿರುವರು ಬಸವಣ್ಣನವರು.
ಇಲ್ಲಿ ಅವರು ಕುರಿತಿರುವ ಅನ್ಯದೈವ ವ್ಯಂತರವೇ ಆಗಲಿ ಬೆಂತರವೇ ಆಗಲಿ-ಅವು ಮಣ್ಣಿಂದ ಮಾಡಿದ ಮೂರ್ತಿಗಳೆಂದೂ, ಬಣ್ಣ ಬಳಿದು ಮಾಡಿದವುಗಳೆಂದೂ-ಅವುಗಳಿಗೆ ಹಲ್ಲುಗಳನ್ನು ತಿನ್ನುವುದಕ್ಕೆ ಬದಲಾಗಿ ಕಪ್ಪೆಚಿಪ್ಪು ಮುಂತಾದುವನ್ನು ತಂದು ಅವುಗಳ ಬಾಯಲ್ಲಿ ಹೂತು ಸಿಕ್ಕಿಸುತ್ತಿದ್ದರೆಂದೂ ಊಹಿಸಬಹುದು. ಊರ ಹೊರಗೆ, ಆಲದ ಮರದ ಕೆಳಗೆ-ಬಳಿದ ಬಣ್ಣದಿಂದ ರಾವು ಸುರಿಯುವ, ಕಿಸಿದ ಬಾಯಲ್ಲಿ ಅಗಲವಾಗಿ ಹಲ್ಲುಗಿಂಜಿರುವ ಆ ದೇವರುಗಳನ್ನು ನೋಡಲು ಅಬಲೆಯರಿಗೆ ಭಯವಾಗುವುದಿಲ್ಲವೆ?
ಹೀಗೆ ಭಕ್ತಿಯನ್ನು ಬಿಟ್ಟು, ಭಯವನ್ನು ಹುಟ್ಟಿಸುವ ದೇವರೇಕೆ ನಿಮಗೆ ಪ್ರಿಯವಾದನೆಂದು ಬಸವಣ್ಣನವರು ಜನಸಾಮಾನ್ಯರನ್ನು ಕುರಿತು-ಈ ಅಕ್ಕಗಳ ನೆಪದಲ್ಲಿ-ಕೇಳುತ್ತಿರುವರು. ಮಾನವ ಮನೋದೌರ್ಬಲ್ಯಗಳೇ ಮೂರ್ತಿವೆತ್ತಂತಿರುವ ಈ ದೈವಗಳು ಸಾಮಾಜಿಕವಾಗಿ ದುರ್ಬಲರಾದವರಿಗೆ ಪ್ರಿಯವಾಗುವುದೊಂದು ದುರದೃಷ್ಟದ ಸಂಗತಿ.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.