Hindi Translationव्यास मछुए का पुत्र है, मार्कंडेय मातंगी का पुत्र
मंडोदरी मंडूक की पुत्री है !
जाति न देखो, जाति के पहले तुम क्या थे?
साक्षात् अगस्त्य व्याध था, दुर्वासा चर्मकार
कश्यप लोहार, कौंडिन्य नामक ऋषि
जैसे तीनों लोक जानते हैं नाई था ।
कूडलसंगम का वचन है -
श्वपच होने पर भी शिवभक्त ही कुलीन है’ ॥
Translated by: Banakara K Gowdappa
English Translation Vyāsa is a fisherman's son,
Mārkaṇḍēya, of an outcast born,
Maṇḍōdari, the daughter of a frog!
O, look not for caste; in caste,
What were you in the past?
Indeed, Agastya was a fowler,
Dūrvāsa, a maker of shoes,
Kāśyapa, a blacksmith;
The sage, Kauṇḍanya by name,
Was, as the three worlds know,
A barber... Mark ye all, the words
Of our Kūḍala Saṅga run:
"What matters one is lowly-born?
Only a Śivabhakta is well born!"
Translated by: L M A Menezes, S M Angadi
Tamil Translationவியாசர் பல்லக்குத் தூக்கியின் மகன்,
மார்க்கண்டேயன் சண்டாளப் பெண்ணின் மகன்
மண்டோதரி தவளையின் மகள்
குலத்தைத் தேடாதீர்
குலத்தினால் முன்பு என்னவாயிற்று?
அகத்தியர் வேடர், துர்வாசர் சக்கிலி
கச்யபர் கம்மாரர், கொண்டின்யமுனிவர்
மூவுலகறிய நாவிதர் காணீர்
நாய் ஊனை உண்பவனாயினும் சிவபக்தனே
உயர்குலத்தோன் என்பது கூடல சங்கனின் கூற்று அன்றோ!
Translated by: Smt. Kalyani Venkataraman, Chennai
Urdu Translationدیاس بیٹا ہےاک مچھیرن کا
مارکھنڈیا نیچ کا ہے پسر
اورمنڈودری ہے دخترِغوک
کیوں اُلجھتے ہو ذات پات میں تم
اس سے کیا فائدہ ملےگا تمھیں
جبکہ ہرشخص کوہےعلم یہاں
وہ اگستیا تواک شکاری تھے
اوردُرواس ایک موچی تھے
تینوں عالم کوہےخبراس کی
کونڈنیّا بھی ایک نا ئی تھے
نچلے درجوں میں پیدا ہونے سے
قدرِانسانیت نہیں گھٹتی
کوڈلا سنگمیش کہتے ہیں
جوبنےگاجہاںمیںشیوبھگت
اس کا رُتبہ ہی سب سےاعلٰی ہے
Translated by: Hameed Almas
ಕನ್ನಡ ವ್ಯಾಖ್ಯಾನನಾಲ್ಕು ಯುಗಗಳ ಪರ್ಯಾಯದಲ್ಲಿ ಪ್ರತಿ ದ್ವಾಪರಕ್ಕೊಮ್ಮೆ ಒಬ್ಬ ವ್ಯಾಸ ಹುಟ್ಟುವನು. ಇದುವರೆಗೆ ಹುಟ್ಟಿದ ವ್ಯಾಸರಲ್ಲಿ 28ನೇ ವ್ಯಾಸನ ಹೆಸರು ಕೃಷ್ಣದ್ವೈಪಾಯನನೆಂದು, ವೇದವನ್ನು ಚತುರ್ವೇದಗಳಾಗಿ ವಿಂಗಡಿಸಿದವನು, ಬ್ರಹ್ಮಸೂತ್ರಗಳನ್ನು ನಿರೂಪಿಸಿದವನು, ಭಗವದ್ಗೀತೆಯನ್ನು ರಚಿಸಿದವನು, ಭಾರತವನ್ನು ಅಷ್ಟಾದಶಪುರಾಣಗಳನ್ನೂ ಬರೆದವನು ಈ ಮಹನೀಯನೇ. ಭಾಗವತವನ್ನು ಬರೆದ ಶುಕಮುನಿಯೂ ಈ ವ್ಯಾಸನ ಪುತ್ರನೇ. ಹೀಗೆ ಹಿಂದೂ ಸಂಸ್ಕೃತಿಗೆ ಧ್ರುವತಾರೆಯಂತಿರುವ ಈ ವ್ಯಾಸನು ಹುಟ್ಟಿದ್ದು ಅಂಬಿಗರ ಜಾತಿಯ ಮತ್ಸ್ಯಗಂಧಿ(ಸತ್ಯವತಿ) ಎಂಬುವಳ ಹೊಟ್ಟೆಯಲ್ಲಿ.
ಶಿವನನ್ನು ಪೂಜಿಸಿ ಸಾವನ್ನು ಗೆದ್ದು ನಿತ್ಯಯೌವನಶಾಲಿಯೂ ಜ್ಞಾನಿಯೂ ಮಹಾಶಿವಭಕ್ತನೂ ಆದ ಮಾರ್ಕಂಡೇಯನು ಹುಟ್ಟಿದ್ದು ಒಬ್ಬ ಹೊಲತಿ(ಮಾತಂಗಿ)ಯ ಹೊಟ್ಟೆಯಲ್ಲಿ. ಇಕ್ಷ್ವಾಕುವಂಶದರಸನಾದ ಪ್ರಖ್ಯಾತ ಪರೀಕ್ಷಿತನ ಪ್ರಿಯಪತ್ನಿಯಾದ ಮಂಡೋದರಿ(ಸುಶೋಭನೆ?)ಯು ಮಂಡೂಕನ(ಕಪ್ಪೆಯ)ಮಗಳು.
ಹೀಗೆ ಮಹಾಪ್ರತಿಭಾಶಾಲಿಗಳೂ ದೈವಭಕ್ತರೂ ಪ್ರತಿಷ್ಠಿತರೂ ಹುಟ್ಟಿದ್ದು ಮೇಲುಜಾತಿಯವರ ಹೊಟ್ಟೆಯಲ್ಲಲ್ಲ. ಅಷ್ಟೇಕೆ-ಅಗಸ್ತ್ಯ ದುರ್ವಾಸ ಕಶ್ಯಪ ಕೌಂಡಿನ್ಯ ಮುಂತಾದ ಗೋತ್ರಮಹರ್ಷಿಗಳೂ ಬೇಡರ ಚಮ್ಮಾರರ ಕಮ್ಮಾರರ ಕ್ಷೌರಿಕರ ಹೊಟ್ಟೆಯಲ್ಲಿ ಹುಟ್ಟಿದವರು. ಇವರೆಲ್ಲ ಹುಟ್ಟಿನಿಂದ ಕೀಳೆನ್ನುವ ಜಾತಿಗಳಲ್ಲಿ ಹುಟ್ಟಿದವರಾದರೂ-ಅವರು ಎಲ್ಲರ ಗೌರವಕ್ಕೆ ಪಾತ್ರವಾದುದು ತಮ್ಮ ಶಿವಭಕ್ತಿಯ ಮಹಿಮೆಯಿಂದಲೇ. ಈ ಮಾತನ್ನು ಸಮರ್ಥಿಸಲು ಆಗಮಗಳಲ್ಲಿ “ಶ್ವಪಚನಾದರೇನು ಶಿವಭಕ್ತನೇ ಕುಲಜನು” ಎಂದು ಹೇಳಿರುವ ಮಾತನ್ನು ನಮ್ಮ ಗಮನಕ್ಕೆ ತಂದಿರುವರು ಬಸವಣ್ಣನವರು.
ಹಿಂದುಳಿದವರನ್ನು ಅಸ್ಪೃಶ್ಯರನ್ನು ಗುಡ್ಡಗಾಡಿನ ಜನರನ್ನು ಶೂದ್ರರೆಂದು ಚಂಡಾಲರೆಂದು ವ್ರಾತ್ಯರೆಂದು ಜರೆದು-ಮಹಾಪ್ರತಿಭಾಶಾಲಿಗಳಾಗುವ ಸಾಧ್ಯತೆಗಳನ್ನು ಒಳಗೊಂಡಿರುವ ಆ ಜನಸಾಮಾನ್ಯರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದ ವೈದಿಕರ ಮಂದಬುದ್ಧಿಯನ್ನೂ ಮದವನ್ನೂ ಸ್ವಾರ್ಥವನ್ನೂ ವಂಚನೆಯನ್ನೂ ಈ ವಚನದ ಮೂಲಕ ಬಯಲಿಗೆಳೆಯುತ್ತಿರುವರು ಬಸವಣ್ಣನವರು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.