ಕೊಲುವನೇ ಮಾದಿಗ, ಹೊಲಸು ತಿಂಬವನೇ ಹೊಲೆಯ!
ಕುಲವೇನೋ, ಅವಂದಿರ ಕುಲವೇನೋ?
ಸಕಲಜೀವಾತ್ಮರಿಗೆ ಲೇಸನೇ ಬಯಸುವ
ನಮ್ಮ ಕೂಡಲಸಂಗನ ಶರಣರೇ ಕುಲಜರು.
Art
Manuscript
Music Courtesy:Kolluvavane Album/Movie: Vachana Gaanambudhi Singer: Ravindra Soragavi Music Director: Devendra Kumar Mudhol Lyricist: Basavanna Music Label : Lahari Music
Hindi Translationहत्यारा ही अंत्यज है,
अशौच भक्षक ही श्वपच है!
कुल क्या है, उनका कुल क्या है?
सकल जीवात्माओं की हितैषी
मम कूडलसंगमेश के शरण ही कुलीन हैं ॥
Translated by: Banakara K Gowdappa
English Translation The man who slaya is a pariah
The man who eats the carrion is a low-caste person
Where is the caste here - where?
Our Kūḍalasaṅga'sŚaraṇās
Who loves all living things,
He is the well-born one!
Translated by: L M A Menezes, S M Angadi
Tamil Translationகொலைஞனே கீழ்க்குலத்தோன்
ஊன் உண்பவனே புலையன்
குலமென்ன? எக்குலமாயினென்ன?
உயிரினத்திற்கு நன்மையை விரும்பும்
நம் கூடல சங்கனின் அடியாரே நற்குலத்தவராம்
Translated by: Smt. Kalyani Venkataraman, Chennai
Telugu Translationపొడుచువాడే మాదిగ పొలసుతినువాడే మాల!
కులమేమో వారి కులమేమో?
సకల జీవులకు మంచి దలచు శరణులే కులజులయ్యా!
Translated by: Dr. Badala Ramaiah
Urdu Translationوہی ہےنیچ جوکرتا ہے قتلِ انسانی
وہی ہےنیچ جوگندی غذائیں کھاتا ہے
کسی کےحکم سےبنتی نہیں ہےذات کوئی
یہ ذات پات تواپنےعمل سے بنتی ہے
مرےعزیزمرے دیوا کوڈلا سنگم
ترے شرن کےسواکون ہےجودنیا میں
ہرایک قلب ِپریشاں کےکام آتا ہو
ترےشرن کےسواکس کی ذات اونچی ہے
Translated by: Hameed Almas
ಕನ್ನಡ ವ್ಯಾಖ್ಯಾನಹುಟ್ಟಿನಿಂದ ಕುಲವಿಲ್ಲ
ಇಲ್ಲಿ ಅಣ್ಣನವರು 'ಮಾದಿಗ', 'ಹೊಲೆಯ', 'ಕುಲಜ', ಈ ಶಬ್ದಗಳ ಪರಿಭಾಷೆಯನ್ನಿತ್ತಿದ್ದಾರೆ. ಒಬ್ಬ ಜಾತಿಯಿಂದ ಮಾದಿಗರವನಾಗಿರಬಹುದು. ಆದರೆ ಉತ್ತಮ ಸಂಸ್ಕಾರದಿಂದ ಶ್ರೇಷ್ಠ ಕುಲದವನಾಗಲು ಸಾಧ್ಯ. ಇದನ್ನೇ ಅನುಭವಿಗಳು ಸಂಸ್ಕೃತದಲ್ಲಿ 'ಜನ್ಮನಾಜಾಯತೇ ಶೂದ್ರಃ ಕರ್ಮಣಾ ದ್ವಿಜ ಉಚ್ಯತೇ' ಅಂದರೆ ಜಾತಿಯಿಂದ ಶೂದ್ರನಾಗಿದ್ದರೂ ಆಚರಣೆಯಿಂದ ಬ್ರಾಹ್ಮಣನೆನಿಸಿಕೊಳ್ಳುವನು ಎಂದಿರುವುದು. ವಿಶ್ವಾಮಿತ್ರ ಜಾತಿಯಿಂದ ಕ್ಷತ್ರಿಯನಾಗಿದ್ದ. ಆದರೆ ಸಂಸ್ಕಾರ ಬಲದಿಂದ ಬ್ರಾಹಣನೆನಿಸಿಕೊಂಡ. ಒಬ್ಬ ಜಾತಿಯಿಂದ ಉತ್ತಮ ಕುಲದವನಾಗಿರಬಹುದು. ಆದರೆ ತನ್ನ ಹೇಯಕೃತ್ಯಗಳಿಂದ ಮಾದಿಗನಿಗಿಂತಲೂ ಅಧಮನೆನಿಸಿಕೊಳ್ಳುವನು. ಆದ್ದರಿಂದ ಶ್ರೇಷ್ಠತೆ ಹುಟ್ಟಿನಿಂದ, ಜಾತಿಯಿಂದ ಬರುವ ವಸ್ತುವಲ್ಲ; ಉತ್ತಮ ಗುಣಗಳಿಂದ, ಉತ್ತಮ ಕೃತಿಗಳಿಂದ ಬರುವಂತಹುದು. ಒಬ್ಬ ವ್ಯಕ್ತಿ ಜಾತಿಯ ದೃಷ್ಟಿಯಿಂದ ಉತ್ತಮನೆನಿಸಿಕೊಂಡರೂ ಪ್ರಾಣಿಗಳನ್ನು ಕೊಲ್ಲಲನುವಾದರೆ ಮಾದಿಗನೆನಿಸಿ ಕೊಳ್ಳುವನು. ಹೊಲಸನ್ನು ತಿಂದರೆ, ಅಲ್ಲದುದ ನುಡಿದರೆ ಹೊಲೆಯನೆನಿಸಿಕೊಳ್ಳುವನು. ಹಾಗಾದರೆ 'ಕುಲಜ'ನಾರು? ಸಕಲ ಜೀವಾತ್ಮರ ಹಿತವನ್ನು ಬಯಸುವ, ಅವರ ಹಿತವೇ ತನ್ನ ಹಿತವೆಂದು ಭಾವಿಸುವ ಶರಣನೇ 'ಕುಲಜ'ನು.
- ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.
ಈ ವಚನದಲಿ ಬಸವಣ್ಣನವರ ಪ್ರಕಾರ ಹೊಲಸು ಎಂದರೇನು? ಹೊಲಸನು ಯಾವುದಕೆ ಹೋಲಿಸಿದಾರೆ?
  Harish
India.karnataka
ವಚನಕಾರ ಮಾಹಿತಿ
ಬಸವಣ್ಣ
ಅಂಕಿತನಾಮ:
ಕೂಡಲಸಂಗಮದೇವ
ವಚನಗಳು:
1409
ಕಾಲ:
12ನೆಯ ಶತಮಾನ
ಕಾಯಕ:
ಪ್ರಧಾನಮಂತ್ರಿ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಇಂಗಳೇಶ್ವರ-ಬಾಗೇವಾಡಿ, ವಿಜಯಪುರ ಜಿಲ್ಲೆ.
ಕಾರ್ಯಕ್ಷೇತ್ರ:
ಕೂಡಲಸಂಗಮ-ಮಂಗಳವೇಢೆ-ಕಲ್ಯಾಣ
ತಂದೆ:
ಮಾದರಸ
ತಾಯಿ:
ಮಾದಲಾಂಬಿಕೆ
ಸತಿ/ಪತಿ:
ಗಂಗಾಂಬಿಕೆ ಮತ್ತು ನೀಲಾಂಬಿಕೆ
ಐಕ್ಯ ಸ್ಥಳ:
ಕೂಡಲಸಂಗಮ, ಹುನಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಪೂರ್ವಾಶ್ರಮ:
ಆಗಮಿಕ ಶೈವಬ್ರಾಹ್ಮಣ
ಸಂಕ್ಷಿಪ್ತ ಪರಿಚಯ:
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.