Hindi Translationसुनिए, सुनिए महाशयों, गुरुपदेश
एक खंजन के उपदेश से उस दिन
पौलस्त्य ने दशकंठ को नहीं पाया?
सिर फाडकर रखने से पृथ्वी पर
परमात्मा का स्थान दिखाई नहीं पड़ता?
आंत की तंत्रियों के उपदेश से
असुर ने सुरपद नहीं पाया?
युवा हरिणी के उपदेश से
विनाशक्तिराय मुक्तिपथगामी नहीं हुआ?
रंभा के उपदेश से श्वेत
शंभु की सभा में नहीं बैठा?
मम कूडलसंगमदेव के शरणों का उपदेश
सुननेवाले दुरित पापों से मुक्त होकर
लिंगदेव में मन लीन करते हैं ॥
Translated by: Banakara K Gowdappa
English Translation Hearken, O hearken, O Great ones
To the Guru's advice:did not
Paulastya,once upon a time,
By taking counsel from a bottle-bird,
Obtain Rāvaṇa?
If you tore off and gave your head,
Would not the place be seen on earth
Where the Supreme abides?
Did not, through a gut-string'"s advice,
A demon win angelic rank?
Did not King Vinasakti find the Path
By learning Freedom's way and goal
From a young doe?
Was not Svēta qualified to sit
In Sambhu's court ,by Rambha's advice?
For those who listen to the advice
Of our Kūḍala Saṅga's Śaraṇās,
All wickedness and all sin take flight
And their hearts are in Liṅga lost!
Translated by: L M A Menezes, S M Angadi
Tamil Translationகுரு உபதேசத்தைப் பெரியோரே கேண்மின் கேண்மின்
ஒரு கீசகனின் அறிவுரையால்
புலத்தியன் அன்று இராவணனைப் பெற விலையோ?
இரக்கம் மிக்க அறிவுரையால்
அசுரன் அன்று சுரபதவியைப் பெறவிலையோ?
இளம் மங்கையனரின் அறிவுரையால் அன்று
வினாசசக்திராயன் தன் வழியில் சென்று
முக்தியைப் பெறவில்லையோ?
இரம்பையின் அறிவுரையால்
சம்புவின் ஓலக்கத்தில் சுவேதன் அமரவில்லையோ?
நம் கூடல சங்கனின் அடியாரின் அறிவுரைகளைச்
செவிமடுத்தோர் கெட்ட பாவங்கள் விலகி
இலிங்கத்தில் மனமொன்றி இருப்பர் ஐயனே.
Translated by: Smt. Kalyani Venkataraman, Chennai
ಕನ್ನಡ ವ್ಯಾಖ್ಯಾನಹಿಂದಿನ ವಚನದಲ್ಲಿ “ಗುರುವಿನುಪದೇಶ”ವೆಂಬೊಂದು ಮಾತು ಬಂದಿದೆ. ಅದರ ಸ್ವರೂಪವನ್ನಿಲ್ಲಿ ಕಾಣಬಹುದು, ಗುರು ಎಂಬುದು ತತ್ತ್ವಶಃ ಒಂದು ಮಹಾ ವ್ಯಕ್ತಿಯೇ ಆಗಬೇಕಾಗಿಲ್ಲ-ಅದು ಪಕ್ಷಿಯಾಗಬಹುದು. ಒಂದು ಮೃಗವಾಗಬಹುದು. ಒಂದು ಕೋತಿಯೂ ಆಗಬಹುದು. ಒಬ್ಬ ಸೂಳೆಯೂ ಆಗಬಹುದು. ಗುರುವೆನ್ನುವುದೊಂದು ಪಿಂಡವಲ್ಲ-ಎತ್ತಣಿಂದಲಾದರೂ ಬಂದು ನಮ್ಮನ್ನು ತಟ್ಟಿದೊಂದು ಪ್ರಬಲವಾದ ಭಾವಸಂಚಾರ.
ಇದರ ಸಮರ್ಥನೆಗಾಗಿ ಪುಲಸ್ತ್ಯ ಮುಂತಾದವರು ಚಮತ್ಕಾರವಾದ ರೀತಿಗಳಲ್ಲಿ ಉದ್ದೀಪಿತರಾಗಿ ಲೌಕಿಕ ಇಷ್ಟಾರ್ಥಗಳನ್ನೇ ಅಲ್ಲ ಅಲೌಕಿಕ ಮೋಕ್ಷಾದಿಗಳನ್ನೂ ಪಡೆಯುವಂತಾದುದನ್ನು ಈ ವಚನದಲ್ಲಿ ಪ್ರಸ್ತಾಪಿಸಿ ತನ್ನದೇ ಆದೊಂದು ನಿಲುವನ್ನೂ ಸ್ಪಷ್ಟಪಡಿಸಲಾಗಿದೆ.
ಪುಲಸ್ತ್ಯನು ತನ್ನ ತಪದ ಭರದಲ್ಲಿ ಮೈನೆರೆದ ಹೆಂಡತಿಯನ್ನು ಹತ್ತ ವರ್ಷವಾದರೂ ನೆರೆಯಲಿಲ್ಲವೆಂದು -ಹೆಣ್ಣುಗೀಜಗನ ಪಕ್ಷಿಯೊಂದು ತನ್ನ ಗಂಡನ್ನು ಒಲಿಸಿಕೊಳ್ಳುವಾಗ ಆಡಿದ ಮಾತನ್ನು ಸ್ವತಃ ಪುಲಸ್ತ್ಯನೇ ಕೇಳಿಸಿಕೊಂಡು –ತಪದಿಂದ ಎದ್ದು ಬಂದು ಹೆಂಡತಿಯನ್ನು ಸಂತೋಷಪಡಿಸಿದನು. ಮತ್ತು ಆ ಹೆಂಡತಿ ಮಾಡಿದ ಶಿವಪೂಜೆಯ ಬಲದಿಂದ ಪುಲಸ್ತ್ಯನ ತಪ ಕಳೆಯೇರಿ ಅವನು ಶಿವನ ಕೃಪೆಗೆ ಪಾತ್ರನಾಗಿ ಶಿವಭಕ್ತನಾದ ರಾವಣನನ್ನು ಪುತ್ರನನ್ನಾಗಿ ಪಡೆದನು.
ರಾವಣನು ತನ್ನ ತಲೆಯನ್ನು ಕಡಿದಿಕ್ಕಿಯೂ ಶಿವನನ್ನು ಒಲಿಸಿಕೊಳ್ಳಲಾಗಲಿಲ್ಲ. ಆಗ ಕೋತಿಯೊಂದು ಮರಿಯನ್ನು ಈದು-ಮರದಿಂದ ಮರಕ್ಕೆ ನೆಗೆಯುವಾಗ -ದಾಂಗುಡಿಯಿಟ್ಟ ಅದರ ಮಾಸು ಒಣಗಿ ತಂತಿಯಂತಾಗಿ -ಬೀಸಿದ ಗಾಳಿಗೆ ಮಧುರನಾದವನ್ನು ಹೊಮ್ಮಿಸುತ್ತಿತ್ತು. ಆ ಅದ್ಭುತವನ್ನು ಕಂಡ ರಾವಣನು –ತನ್ನ ಕಡಿದ ತಲೆಯನ್ನು ಬುರುಡೆ ಮಾಡಿ, ಕೈಯನ್ನು ಕಡಿದು ಪೋಳಮಾಡಿ, ನರವನ್ನು ಕಿತ್ತುಕೊಂಡು ತಂತಿಮಾಡಿ, ಬೆರಳನ್ನು ಕಡಿದು ಬಿರಡೆ ಮಾಡಿ ತಯಾರಾದ “ರಾವಣ ಹಸ್ತ”ವೆಂಬ ವೀಣೆಯನ್ನು ಬಾಜಿಸಿ ಶಿವನ ಕೃಪೆಗೆ ಪಾತ್ರನಾದನು.
ವಿನಾಶಕ್ತಿರಾಯನು ಯಾರ ಅನ್ನಕ್ಕೋ ಕಂಟಕನಾಗಿ –ತಿನ್ನುವ ಅನ್ನವೆಲ್ಲಾ ಹುಳುವಾಗುವ ಶಾಪದಿಂದ ಕಂಗೆಟ್ಟನು. ಆ ಸಮಯಕ್ಕೆ ಬೇಡನ ಬಲೆಗೆ ಬಿದ್ದ ಹೆಣ್ಣು ಜಿಂಕೆಯೊಂದು ತನ್ನ ಮರಿಗೆ ಹಾಲು ಕುಡಿಸಿ ಬಂದು ನಿನಗೆ ಆಹಾರವಾಗುವೆನೆಂದು ಬೇಡನನ್ನು ಬೇಡಿಕೊಂಡಿತು. ಆ ಬೇಡನು ಸಂಶಯಪಟ್ಟಾಗ –ತಾನೆಂದಿಗೂ ವಿನಾಶಕ್ತಿರಾಯನಂತೆ ಯಾರ ಅನ್ನಕ್ಕೂ ಕಂಟಕವಾಗುವುದಿಲ್ಲವೆಂದು ಭರವಸೆಕೊಟ್ಟಿತು. ಇದನ್ನೆಲ್ಲ ಕಂಡು ಕೇಳಿದ ವಿನಾಶಕ್ತಿರಾಯನು ವೈರಾಗ್ಯದಿಂದ ಮೊಸಳೆಯ ಬಾಯಿಗೆ ಬೀಳಲು ಶಿವನ ಕೃಪೆ ದೊರಕಿ ಶಾಪವಿಮುಕ್ತಿಯನ್ನು ಪಡೆದನು (ನೋಡಿ ವಚನ 625).
ಶ್ವೇತನು ಒಂದು ಕಾಲಕ್ಕೆ ವೇಶ್ಯಾಲಂಪಟನಾಗಿದ್ದು ಆಮೇಲೆ ಪ್ರಸಿದ್ದ ಶಿವಭಕ್ತನಾದವನು. ಅವನು ವೇಶ್ಯಾಲಂಪಟನಾಗಿದ್ದಾಗ ಒಂದು ಸಲ ಸೂಳೆಗೆ ಹೂ ಕೊಂಡೊಯ್ಯುವಾಗ ಹೇಸಿಗೆಯ ಮೇಲೆ ಜಾರಿಬಿದ್ದ ಹೂವೊಂದನ್ನು ಶಿವಾರ್ಪಣವಾಗಲೆಂದು ಮುಂದೆಹೋದ. ಆ ಪುಣ್ಯದ ಫಲವಾಗಿ ರಂಭೆಯೊಡನೆ ರಮಿಸುವ ಒಂದು ಸದವಕಾಶವನ್ನು ಪಡೆದು -ಸ್ವರ್ಗದಲ್ಲಿ ಆ ರಂಭೆಯ ಮುಂದೆ ನಿಂತಾಗ –ಅವಳು ಅವನನ್ನು ಗೇಲಿ ಮಾಡಿ -ಶಿವಪೂಜಾಫಲವನ್ನು ವೇಶ್ಯಾಗಮನಕ್ಕಾಗಿ ವೆಚ್ಚಿಸುವ ನೀನು ಮುರ್ಖನಲ್ಲದೆ ಮತ್ತೇನೆಂದು ಜರಿದು ಬುದ್ಧಿ ಹೇಳಿದಳು. ಆಗ ಜ್ಞಾನೋದಯವಾದ ಶ್ವೇತನು ಮುಂದೆ ಮಹಾಶಿವಭಕ್ತನಾಗಿ ಅಮರತ್ವವನ್ನು ಪಡೆದನು.
ಹೀಗೆ ಒಬ್ಬ ವೇಶ್ಯೆಯ ಅಣಕದ ಬುದ್ಧಿವಾದ, ಜಿಂಕೆಯ ಆಕ್ಷೇಪಣೆಯ ಮಾತು, ಕೋತಿಯ ಕರುಳಿನ ತಂತಿಯ ನಾದ, ಒಂದು ಗೀಜಗನ ಸರಸಸಲ್ಲಾಪ –ಮನುಷ್ಯರ ಮೇಲೆ ಮಹತ್ತರವಾದ ಪ್ರಭಾವವನ್ನು ಬೀರಿ ಅವರ ಜೀವನವನ್ನು ಉದಾತ್ತವಾದ ಕಡೆ ತಿರುಗಿಸಿದವೆಂದಮೇಲೆ -ಸರ್ವಜೀವ ದಯಾಪರರೂ, ವಿಶ್ವಹಿತೈಷಿಗಳೂ ಆದ ಶಿವಶರಣರ ಉಪದೇಶವನ್ನು ಪಡೆದ ಯಾರಿಗೆ ತಾನೇ ಪಾಪಪೂರಿತ ಚಂಚಲಚಿತ್ತತೊಲಗಿ ಶಿವನಲ್ಲಿ ಏಕಾಗ್ರತೆ ಸಮನಿಸದು ?
ಶಿವನಿಗೆ ಶರಣಾಗತರಾದ ಶರಣರಿಗೆ ಶರಣೆಂದು ಅವರಿಂದ ಉಪದೇಶ ಪಡೆದವರಿಗೆ ಪರಮ ಪದವಿ ದೊರೆಯುವುದು ನಿಶ್ಚಯವೆಂದು ಪತಿತರಿಗೂ ಪಾಪಿಗಳಿಗೂ ಬಸವಣ್ಣನವರು ಸಾರಿ ಹೇಳಿ ಕರೆಕೊಡುತ್ತಿರುವರು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.