Hindi Translationशस्त्र से शस्त्र टकराये बिना
पराक्रम दिखाई नहीं पड़ता
कथित वचन से विमुख हो,
तो मन को लज्जित होना चाहिए ।
निःसार बातों से कैसे होती है भक्ति?
पापी के शिशु को उठाने की भाँति
कूडलसंगमदेव की भत्कि हीन मनस्कों से साध्य नहीं ।
Translated by: Banakara K Gowdappa
English Translation No valour can be seen unless one sword
Strikes another ;and mind should blush at mind
If the pledged word should fail.
Ho is it possible to have
Devotion when all your valour is in words?
It is surely as though one would pick up
Achild of sinner and devoured by it.
It's is not for baser minds to win
Lord Kūḍala Saṅgama's piety;
Translated by: L M A Menezes, S M Angadi
Tamil Translationவாளும் வாளும் உரசினாலன்றி வீரத்தைக் காணவியலாது
சொன்ன சொல் தவறின் மனம் நாண வேண்டும்
பயனற்ற பேச்சினால் பக்தி எப்படி அரும்பும்?
பாவியின் குழந்தையை முன்னேற்றுவதனையதாம்
கூடல சங்கமதேவனின் பக்தி கீழ்மையான
மனமுள்ளோருக்குப் பொருந்துமோ?
Translated by: Smt. Kalyani Venkataraman, Chennai
Telugu Translationకత్తి కత్తిని దాక కే కన్పింపదు శౌర్యాగ్ని
ఆడి తప్పిన ఆ చిత్తమునకు చిత్తమే సిగ్గగు:
శబ్దాడంబరమున భక్తి సమకూడదయ్యా,
పాపి పాపనె త్తినట్లగుగాని భక్తి
చంచలాత్ములకు పట్టదయ్యా! కూడల సంగయ్యా!
Translated by: Dr. Badala Ramaiah
ಕನ್ನಡ ವ್ಯಾಖ್ಯಾನಬರಿಯ ಮಾತಿಂದ ಶೌರ್ಯವನ್ನು ಅಳೆಯಲಾಗುವುದಿಲ್ಲ-ಅದು ನಿರ್ಣಯವಾಗುವುದು ಕತ್ತಿಗೆ ಕತ್ತಿ ಖಣಿಲೆಂದಾಗಲೇ! ಆಡಿದ ಮಾತಿನ ಸಾಚಾತನ ಸಾಬೀತಾಗುವುದೂ –ಆ ಮಾತಿನಂತೆ ಆಚರಿಸಿದಾಗಲೇ! ಕೈಲಾಗದವನು ಖಡ್ಗವನ್ನು ಹಿಡಿದರೇನಾಗುವುದೆಂಬುದು ತಿಳಿದೇ ಇದೆ -ನುಡಿಗೆ ತಕ್ಕ ನಡೆಯಿಲ್ಲದಿದ್ದರೆ ಏನಾಗುವುದೆಂಬುದನ್ನು ಬಾಯಿಬಡುಕರು ತಿಳಿದಿರಬೇಕು.
ನಾಲಗೆಗಿಂತ ಉದ್ದುದ್ದವಾದ ಮಾತನಾಡಿ ಅಡ್ಡಡ್ಡವಾಗಿ ನಡೆಯುವ ಜನರೆಂದಿಗೂ ಶಿವಭಕ್ತರೆನಿಸಲಾರರು. ಶಿವಭಕ್ತನಿಗೆ ಆಡುವ ಮಾತು ಮಂತ್ರ –ಅದನ್ನು ಸಿದ್ಧಿಸಿಕೊಳ್ಳಲು ಅವನು ತನ್ನ ತಲೆಯನ್ನು ಕೊಡುವುದಕ್ಕೂ ಸಿದ್ಧನಿರಬೇಕು.
ಮಾತಿಗೆ ದುಡುಕಿ, ಮಾಡಲು ಅಳುಕುವವನಿಗೆ ಶಿವಭಕ್ತಿಯೆಂದೂ -ಪಾಪಿಯ ಕೂಸಿನಂತೆ ಅಳವಡುವುದಿಲ್ಲ.
ವಿ : ಪಾಪಿಯ ಕೂಸು : ಶ್ರೀಶೈಲದಲ್ಲಿ ಕದಳೀವನದ ಮಾರ್ಗವಾಗಿ ಕೈಲಾಸದತ್ತ ನಡೆದಾಗ –ಯಾತ್ರಿಕರ ಆಧ್ಯಾತ್ಮಿಕ ಅರ್ಹತೆಯನ್ನು ಪರೀಕ್ಷಿಸುವ ಹಲವಾರು ಅಸಾಧಾರಣ ಎಡರು ತೊಡರುಗಳು ಅಡ್ಡವಾಗುವವು. ಅವುಗಳಿಂದೆಲ್ಲ ಪಾರಾಗಿ ಮುಂದುವರಿದರೆ ಕೈಲಾಸ ಕಾಣುವುದೆಂಬುದು ಒಂದು ನಂಬಿಕೆ. ಈ ಮೇಲೆ ಹೇಳಿದ ಎಡರುತೊಡರುಗಳಲ್ಲಿ ಪಾಪಿಯ ಕೂಸೆಂಬುದೂ ಒಂದು. ಇದೊಂದು ಮುದ್ದಾದ ಮಾಯದ ಮಗು. ಇಂಥ ಮಗುವನ್ನು ಯಾವ ಪಾಪಿಗಳು ಈ ನಿರ್ಜನವಾದ ಕಾಡಿನಲ್ಲಿ ಬಿಟ್ಟು ಹೋದರೋ ಎಂದು ಯಾರಾದರೂ ಯಾತ್ರಿಕರು ಅದನ್ನು ಎತ್ತಿಕೊಂಡರೆ-ಅದು ಅವರ ತೋಳನ್ನೇ, ಎದೆಯೂಡಿದರೆ ಅವರ ಮೊಲೆಯನ್ನೇ ಕಚ್ಚಿ ತಿಂದು ಸಾಯಿಸುವುದು. ಆ ಯಾತ್ರಿಕರು ಮಹನೀಯರಾದರೆ ಅದರ ಈ ಆಟವೇನೂ ಅವರ ಬಳಿ ನಡೆಯದು (ನೋಡಿ ಭೈ.ಕಾ.ಕ.ಸೂ.ರತ್ನಾಕರ ಸಂಪುಟ 2, ಪುಟ 305).
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.