Hindi Translationलिंगधारण कर भक्तों में
तुम्हें न देखूँ और उन्हें
चोर, लुटेरे, सँपेरे, व्यभिचारी
सैनिक या सेवक कहते भेद मानूँ, तो वह द्रोह है ।
मेरी करनी और कथनी में च्युति हो, तो
मुझे कूडलसंगमेश को दर्शानेवाले
चन्नबसवण्णा की सौगंध है ॥
Translated by: Banakara K Gowdappa
English Translation If I call men by several names:
Thieves, highwaymen,
Snake-charmers, fornicatiors.
Servants of martial men;
And if I fail to say
The bhaktas who have come, with you on
Are all but you-it's my offence.
If I belie my word or deed,
May Cennabasavaṇṇa's curse-
His who has shown me Kūḍala Saṅgama-
Be upon me!
Translated by: L M A Menezes, S M Angadi
Tamil Translationகள்ளன், சூறையாடுவோன், பாம்பாட்டி, காமுகன்
சேவகன், சிப்பாய் என்றேன் எனின், உன் முதற்கொண்டு
வந்த பக்தரை உன்னைப் போலே காணேன் எனின்
அது துரோகம் சொல்லில், செயலில் பொய் இருப்பின்
கூடல சங்கனைக் காட்டிய சென்ன பசவன் மீது ஆணை
Translated by: Smt. Kalyani Venkataraman, Chennai
Telugu Translationదొంగ, బందిపోటు, ఱంకు, పాములవాడు, బంటు;
పరిచారకులని నీ భక్తుల కసర వచ్చునే?
ఈ వచ్చు భక్తుల నిన్నుగా తలపకున్న ద్రోహమయ్యా:
నా నడనుడల తప్పిన చెన్నబసవడే సాక్షి దేవా!
Translated by: Dr. Badala Ramaiah
Urdu TranslationTranslated by: Hameed Almas
ಸ್ಥಲ -
ಮಾಹೇಶ್ವರನ ಭಕ್ತಸ್ಥಲವಿಷಯ -
ನಡೆ-ನುಡಿ
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನಹೀಗೆ ಬಸವಣ್ಣನವರ ಶಿವಧರ್ಮಕ್ಕೆ ಸಾಮಾಜಿಕವಾಗಿ ಸರಾಸರಿಗಿಂತ ಕೆಳದರ್ಜೆಯ ಹಲವಂದದ ಪಂಗಡ ಬುಡಕಟ್ಟಿನ ಗುಡ್ಡಗಾಡಿನ ವಿಶಿಷ್ಟ ಪರಿಶಿಷ್ಟ ವರ್ಗದ ಜನರೂ ಸೇರಿದ್ದು – ಅವರಲ್ಲಿ ಹಲವರು ಹಾವಾಡಿಗರಂತೆ ಅಲೆಮಾರಿ ಕಾಯಕದವರೂ, ಬಂದಿಕಾರ ಬಂಟ ಓಲೆಯಕಾರರಂತೆ ವಿವಿಧ ಚಾಕರಿಯ ಜನರೂ ಇದ್ದರಲ್ಲದೆ, ಕಳ್ಳತನದಿಂದಲೇ ಹಾದರದಿಂದಲೇ ಜೀವನ ನೀಸಬೇಕಾಗಿದ್ದ ಆಜನ್ಮ ಅಪರಾಧ (ಪ್ರ)ವೃತ್ತಿಯವರೂ ಇದ್ದರು. ಇಂಥವರಲ್ಲಿ ಕಳ್ಳರೆಂಬ(ಜಾತಿಯ)ವರು ಹಾದರಿಗರೆಂಬ(ಜಾತಿಯ)ವರು ತಮ್ಮ ಪೂರ್ವರೂಢಿಯ ಅಪರಾಧಗಳನ್ನು ಕೈಬಿಟ್ಟು ಸಜ್ಜನರೇ ಆಗಿ ಪರಿವರ್ತನೆಗೊಂಡಿದ್ದರೂ-ಜನ ಅವರ ಹಳೆಯ ವೃತ್ತಿಗಳನ್ನು ಎಣಿಸಿ ಜರಿಯುವುದನ್ನು ಬಿಟ್ಟಿರಲಿಲ್ಲ. ಆ ಸಂದರ್ಭದಲ್ಲಿ ಬಸವಣ್ಣನವರು ಲಿಂಗಧಾರಿಗಳಾದ ಆ ಎಲ್ಲರನ್ನೂ ತಾರತಮ್ಯವಿಲ್ಲದೆ ಶಿವಸಮಾನವಾಗಿಯೇ ಗೌರವಿಸುವೆನೆನ್ನುತ್ತ-ಇನ್ನಿತರರಿಂದಲೂ ಅದೇ ನಡೆವಳಿಯನ್ನು ನಿರೀಕ್ಷಿದರು.
ಈ ವಚನವನ್ನು ವಿಶ್ಲೇಷಿಸಿ ನೋಡಿದರೆ-ಎಷ್ಟು ಬಗೆಯ ಪರಿತ್ಯಕ್ತ ಪಾಮರಜನಾಂಗದವರಿಗೆ ಬಸವಣ್ಣನವರು ತಮ್ಮ ಧರ್ಮಚ್ಛತ್ರದಡಿಯಲ್ಲಿ ಏಕಾಸನದಲ್ಲಿ ಆಶ್ರಯಕೊಟ್ಟಿದ್ದರೆಂಬುದು ಕಣ್ಣಿಗೆ ಕಟ್ಟಿದಂತಾಗುವುದು.
ವೃತ್ತಿಯಿಂದ ಹಾವಾಡಿಗರಾದವರೂ ಲಿಂಗ ಕಟ್ಟಿಕೊಂಡು ಬಸವಣ್ಣನವರ ಧರ್ಮಕ್ಕೆ ಸೇರಿದ್ದರೆಂದರೆ-ಆ ಧರ್ಮ ಅದೆಷ್ಟು ವ್ಯಾಪಕವಾಗಿ ಜನಸಾಮ್ಯಾನ್ಯಪ್ರಿಯವಾಗಿತ್ತೆಂಬುದು ಸ್ವತಸ್ಸಿದ್ಧವಾಗುವುದು.
ವಿ : ಬಂದಿಕಾರ : ಚಿನ್ನದ ಬೆತ್ತ ಬೆಳ್ಳಿಯ ಬೆತ್ತ ಹಿಡಿದುಕೊಂಡು ಬಾಜುಬಿಡಿಸುವವನು. ಬಂಟ : ಅಟ್ಟೂಳಿಗ ಹರದೂಳಿಗವನ್ನು ಮಾಡಿಕೊಂಡಿರುವಂಥ ಪಟುಭಟನು. ಓಲೆಕಾರ : ಕತ್ತಿಕಂದಲಿಯನು ಹಿಡಿದುಕೊಂಡು ಓಲೈಸುವಂಥ ಚಾಕರಿ ಮಾನವನು (ಹಳೆಯ ವ್ಯಾಖ್ಯಾನದಿಂದ)
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.