Hindi Translationदेखो, मेरी माँ पिशाचिनी सी है,
बाप पिशाच सा,
मेरा पति पंगु सा है!
काठ के पैरों से पीछा कर पीट कर देखो ।
आज मेरा दांपत्य-जीवन टूट क्यों न जाय
काठ के पैर छोड दूँ,
तो तव सौगंध है, कूडलसंगमदेव ॥
Translated by: Banakara K Gowdappa
English Translation My mother seems to me a female demon
My father seems a male one,
My husband seems a cripple!
Look Sir, you chase and bruise me
With wooden legs:
Let now my wifely state go hang, even now-
Thy curse be upon me,
O Kūḍala Saṅga Lord
If I should leave the wodden legs!
Translated by: L M A Menezes, S M Angadi
Tamil Translationபெண் பிசாசனைய தாய் விளங்க
ஆண் பிசாசனைய தந்தை விளங்க
கையற்று கணவன் விளங்க
மரக் காலால் துகைத்தான் ஐயனே
கூடி வாழ்வது அகன்றால் அகலட்டும்
மரப்பாதுகையை விடின், சங்கனே உம்மாணை.
Translated by: Smt. Kalyani Venkataraman, Chennai
Telugu Translationనా తల్లి దయ్యము; నా తండ్రి పిశాచి;
నా పతి కుంటివాడు నా కాలికి తుండు తగిలింపుమా;
నా కాపుర మిక్కడికే చెడినా చెడనీ!
తుండు మాత్రము నీ సాక్షిగా
తొలగింప యత్నింపనయ్యా, సంగమదేవా!
Translated by: Dr. Badala Ramaiah
Urdu TranslationTranslated by: Hameed Almas
ಸ್ಥಲ -
ಮಾಹೇಶ್ವರನ ಭಕ್ತಸ್ಥಲವಿಷಯ -
ಭಕ್ತಿನಿಷ್ಟೆ
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನನನ್ನ ತಾಯಿ ನೋಡಿದರೆ ಗುಮ್ಮಡಿ(ಬತ್ತಲೆ ?)ಯಾದವಳು. ನನ್ನ ತಂದೆಯಾದರೋ ವಿಚಿತ್ರ ವೇಷದ ವಿದೂಷಕ(ಕಲಕೇತ)ನು – ಇದು ನನ್ನ ತವರುಮನೆಯ ಕಥೆಯಾಯಿತು. ಇನ್ನು ನನ್ನ ಗಂಡನ ಮನೆಯಲ್ಲಾದರೂ ಸುಖವಿದೆಯೇ ಎಂದರೆ – ಆ ಗಂಡ ಕೈಯಿಲ್ಲದ ಮೊಂಡ(ಮೋಟ)ನು. ಈ ದಾರುಣ ಜೀವನಕ್ಕೆ ಬೇಸತ್ತು, ಎಲೆ ಶಿವನೇ, ನಾನು ನಿನ್ನ ಮೊರೆಹೊಕ್ಕಿದ್ದೇನೆ. ನಿನ್ನ ಮರದ ಪಾದುಕೆಯಿಂದ ನೀನು ಸಿಕ್ಕಾಬಟ್ಟೆ ನನ್ನನ್ನು ಸದೆದರೂ ಸರಿಯೇ - ನಿನ್ನ ಪಾದಗಳನ್ನು ನಾನು ಬಿಡುವುದಿಲ್ಲ ಎನ್ನುವ ಒಂದು ಹೆಣ್ಣಿನ ದಾರುಣ ಜೀವನದ ಹಿನ್ನೆಲೆಯಲ್ಲಿ - ಬಸವಣ್ಣನವರು ಧರ್ಮಕ್ಷೇತ್ರದಲ್ಲಿ ಶರಣರ ಕಡೆಯಿಂದ ತಮಗಾದ ವಿಕಟ ಸಂಕಷ್ಟಗಳನ್ನು ಶಿವನಲ್ಲಿ ತೋಡಿಕೊಳ್ಳುತ್ತ ಈ ಕಷ್ಟಕಾಲದಲ್ಲಿ ಆ ಶಿವನಲ್ಲದೆ ಅನ್ಯರಾರೂ ರಕ್ಷಿಸುವರಿಲ್ಲವೆಂದು ಅವನಲ್ಲಿ ಅನನ್ಯವಾಗಿ ಮೊರೆಯಿಡುತ್ತಿರುವರು.
ವಿ : ಈ ವಚನದಲ್ಲಿ ಬಸವಣ್ಣನವರು ಕೆಲವು ಶರಣರನ್ನು ಶ್ಲೇಷೆಯಿಂದ ಸ್ಮರಿಸುವಂತೆಯೂ ಇದೆ.
ಶಿವಶರಣರಲ್ಲಿ ಕಲಕೇತ(ಬೊಮ್ಮಯ್ಯ)ನೆಂಬ, ಮೋಟ(ಮಲ್ಲಯ್ಯ)ನೆಂಬ ಶರಣರಿದ್ದರು, ಕಲಕೇತ ಬೊಮ್ಮಯ್ಯನು ಕಲಕೇತವೆಂಬ ಜನಪದಕಲೆಯ ಪ್ರಕಾರವೊಂದನ್ನು ತನ್ನ ಕಾಯಕ ಮಾಡಿಕೊಂಡು ಜಂಗಮದಾಸೋಹ ಮಾಡುತ್ತಿದ್ದವನು. ಈ ಕಲಕೇತಕಾಯಕದ ವಿವರವನ್ನು ಬಸವಪುರಾಣದಲ್ಲಿ ಅದೇ ಕಲಕೇತಬೊಮ್ಮಯ್ಯನ ಕಥಾಸಂದರ್ಭ (ಸಂಧಿ 29)ದಲ್ಲಿ ಕಾಣಬಹುದು : ಹಣೆಗೆ ವಿಭೂತಿಯನ್ನು ಧರಿಸಿ, ಕಿವಿಗೆ ಚಿಗುರನ್ನು ಸಿಕ್ಕಿಸಿಕೊಂಡು, ಕಾಗಿನ ಕಪ್ಪಡ (ಅಯ್ಯಪ್ಪನ ಭಕ್ತರು ಉಡುವಂಥ ಕಪ್ಪು ಧೋತ್ರ)ವನ್ನು ಉಟ್ಟು. ಎಡಗಾಲಿಗೊಂದು ಅಂದುಗೆಯನ್ನು ತೊಟ್ಟು, ಇನ್ನೊಂದು ಕಾಲಿಗೆ ಗೆಜ್ಜೆಯನ್ನು ಕಟ್ಟಿ – ಒಲೆದೊಲೆದು ನಡೆಯುತ್ತ, ಗಹಗಹಿಸಿ ನಗುತ್ತ –ಎಡದ ಕೈಯಲ್ಲಿ ಟಗರಿನ ಕೊಂಬನ್ನು ಘಿಲಿಕಿಯಾಗಿ ಘಿಲಿಘಿಲಿಸುತ್ತ, ಬಲದ ಕೈಯಲ್ಲಿ ಬೆಳುಗುದುಗೆಯನ್ನು ತಿರುವುತ್ತ – ಮುಂದಲೆಯ ಕೂದಲ ಗಂಟು ಲಯಬದ್ಧವಾಗಿ ಅಲುಗುವಂತೆ ಕುಣಿಯುತ್ತ –ಧರಾರುದ್ರ ನಿಟಿಲಾಗ್ನಿಯ ಟಗರು ಬಂದ, ವೀರಭದ್ರನ ಮದಕರಿ ಬಂದ, ದುಗ್ಗಳವ್ವೆಯ ಮಗ ಬಂದ, ಸಂಗಳವ್ವನ ತಮ್ಮ ಬಂದ, ಅಮ್ಮಗಳಿರಾ ಅಕ್ಕಗಳಿರಾ” ಎಂದು ಹಾಡುತ್ತ ಭಕ್ತರನ್ನು ನಗಿಸುತ್ತ ಆ ಕಾಯಕದಿಂದ ಬಂದ ಭತ್ತದಿಂದ ಜಂಗಮದಾಸೋಹ ಮಾಡುತ್ತಿದ್ದ.
ಮೋಟಮಲ್ಲಯ್ಯ : ಇವನು ದಸರಯ್ಯನೆಂಬ ಅಹಿಂಸಾವಾದಿ ಶಿವಶರಣನನ್ನು ಪರಪ್ರೇರಣೆಯಿಂದ ನೋಯಿಸಿದವನು. ಇವನಿಗೆ ಕೈಗಳಿರಲಿಲ್ಲ – ಆದುದರಿಂದಲೇ ಇವನು ಮೋಟ. ಇವನು ತನ್ನ ಮೊಂಡುಕೈಗಳಿಂದಲೇ ದಸರಯ್ಯಾನನ್ನು ಗುದ್ದಿ ಅವನ ಕೃಪೆಗೆ ಪಾತ್ರನಾಗಿ –ಆ ಮೇಲೆ ಮಹಾಶಿವಭಕ್ತನಾದನೆಂಬುದು ಪ್ರಸಿದ್ಧವೇ ಇದೆ. (ಈ ವಚನದಲ್ಲಿ ಬಸವಣ್ಣನವರು ಒಬ್ಬ ಗುಮ್ಮಡಿಯನ್ನು ತಾಯೆಂದಿರುವರು. ಆ ಶಿವಭಕ್ತೆ ಯಾರೆಂದು ತಿಳಿಯಲಿಲ್ಲ.)
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.