Hindi Translationगुरु के प्रति सदाचार, अनुदिन लिंगार्थ दर्शित भक्ति है
जंगम अनुभाव और समयाचार अनुदिन लिंगार्थ अर्पित समय है;
इन उभयाचारों से प्राप्त ज्ञान अनुदिन लिंगार्थ अर्पित समय है;
लिंग जंगम में लीन समयाचार कुछ और नहीं है,
अतः कूडलसंगमदेव, वह अनुदिन लिंगार्थ अर्पित समय है ॥
Translated by: Banakara K Gowdappa
English Translation Right conduct in the Guru is time
Spent daily for Liṅga ;
Experience in Jaṅgama
And service of the Faith is time
Spent daily for Liṅga ;
The knowledge growing from
The understanding of these two is time
Spent daily for Liṅga :
Nought else is seen.
To be absorbed in Liṅga and Jaṅgama
Is service of the Faith.
Therefore, O Kūḍala Saṅgama Lord,
It's time
Spent daily for Liṅga .
Translated by: L M A Menezes, S M Angadi
Tamil Translationகுருவிற்குத் தொண்டாற்றுதல் நன்னெறி
இலிங்கத்திற்கு நாள்தோறும் தன்னை
அர்ப்பித்தல் வேண்டும். ஜங்கமரை உணர
வேண்டும். இதுதான் சிவாசாரமாம்
இவ்விரு நெறிகளை உணர்ந்த அறிவு
இதனை நாள்தோறும் அர்ப்பிக்க வேணும்
இலிங்க ஜங்கமத்துடன் இணைந்தது
சிவரசாரம் எனவே கூடல சங்கனே
நாள்தோறும் இலிங்கத்திற்கு
அர்ப்பிக்க வேண்டும் ஐயனே.
Translated by: Smt. Kalyani Venkataraman, Chennai
ಕನ್ನಡ ವ್ಯಾಖ್ಯಾನವಚನ ವಿನ್ಯಾಸ : (1) ಗುರುವಿನಲ್ಲಿ (ಸೇವೆಯೇ) ಸದಾಚಾರ. (ಅದರೊಟ್ಟಿಗೇ) ಲಿಂಗದಲ್ಲಿ ಅನುದಿನ ವೇಳೆ. (2) ಜಂಗಮದಲ್ಲಿ ಅನುಭಾವ(ಪ್ರಸಂಗವೇ) ಸಮಯಾಚಾರ. (ಅದರೊಟ್ಟಿಗೇ) ಲಿಂಗದಲ್ಲಿ ಅನುದಿನ ವೇಳೆ, (1+2=3) (ಸದಾಚಾರ ಮತ್ತು ಸಮಯಾಚಾರವೆಂಬ) ಈ ಉಭಯಾಚಾರದಿಂದ ತಿಳಿದ(ದ್ದೇ) (ಶಿವಯೋಗದ) ತಿಳಿವು. (ಆ ಯೋಗದೊಟ್ಟಿಗೇ) ಲಿಂಗದಲ್ಲಿ ಅನುದಿನ ವೇಳೆ. ಈ ಪ್ರಾಣಲಿಂಗ ಮತ್ತು ಜಂಗಮಲಿಂಗವೆರಡನ್ನೂ ಬಿಟ್ಟು ಸಮಯಾಚಾರ(ಧಾರ್ಮಿಕ ವಿಶಿಷ್ಟ ಆಚಾರ)ವೇ ಇಲ್ಲ. ಆದ್ದರಿಂದಲೇ ಇಷ್ಟಲಿಂಗಪೂಜೆ ಅನುದಿನ ನಡೆಯಬೇಕು. (ಇಷ್ಟಲಿಂಗವನ್ನೇ ಯೌಗಿಕವಾಗಿ ಪ್ರಾಣವೆಂದು ಕರೆಯಲಾಗಿದೆ ಶರಣಧರ್ಮದಲ್ಲಿ.)
ವಿವರ : ಲಿಂಗಪೂಜೆಯನ್ನು ಬಿಡದೆ ಗುರುವಿನಲ್ಲಿ ಸದಾಚಾರ ಮಾಡಬೇಕು. ಲಿಂಗಪೂಜೆಯನ್ನು ಬಿಡದೆ ಜಂಗಮದಲ್ಲಿ ಅನುಭಾವ (ಪ್ರಸಂಗವೆಂಬ) ಸಮಯಾಚಾರ ಮಾಡಬೇಕು. ಹೀಗೆ ಮಾಡಿದ ಸದಾಚಾರದಿಂದ ಮತ್ತು ಸಮಯಾಚಾರದಿಂದ ಉದಿಸಿದ ಜ್ಞಾನವು ಸಂಪನ್ನವಾಗುವುದು ಲಿಂಗದಲ್ಲಿ ಮಾಡಿದ ಅನುದಿನ ವೇಳೆಯಿಂದ. ಹೀಗಲ್ಲದೆ (ಗುರುವಿನ ಸಂಬಂಧವಾದ ಸದಾಚಾರವಾಗಲಿ) ಚರಲಿಂಗಸ್ವರೂಪಿಯಾದ ಜಂಗಮದ ಸಂಬಂಧವಾದ ಸಮಾಯಾಚಾರವಾಗಲಿ ಲಭ್ಯವಾಗುವುದಿಲ್ಲ. ಆದ್ದರಿಂದ ಲಿಂಗದಲ್ಲಿ ಅನುದಿನವೇಳೆ(ನಿತ್ಯಪೂಜೆ) ಅನುಲ್ಲಂಘನೀಯವಾಗಿದೆ.
ತಾತ್ಪರ್ಯ : ಗುರುವು ಭಕ್ತನ ಸೇವೆಯನ್ನು ಕೈಗೊಳ್ಳುವುದು –ಆ ಭಕ್ತನು ಲಿಂಗೋಪಾಸಕನಾಗಿದ್ದರೇನೇ. ಜಂಗಮವು ಭಕ್ತನೊಡನೆ ಅನುಭಾವಪ್ರಸಂಗ ಮಾಡುವುದು –ಆ ಭಕ್ತನು(ಪ್ರಾಣ)ಲಿಂಗೋಪಾಸನೆಯಲ್ಲಿ ತೊಡಗಲೆಂದು ಅಥವಾ ತೊಡಗಿದ್ದರೇನೆ. ಆದ್ದರಿಂದ ಭಕ್ತನಿಗೆ ಲಿಂಗದ ಉಪಾಸನೆಯೆಂಬುದು ಅಗತ್ಯ. ಈ ಇಷ್ಟಲಿಂಗವು ಪ್ರಾಣಲಿಂಗವಾಗಿ –ಆ ಪ್ರಾಣಲಿಂಗವು ಸಹಸ್ರಾರ ಸಿಂಹಾಸನದಲ್ಲಿ ಪ್ರತಿಷ್ಠಿಸಲ್ಪಟ್ಟರೆ-ಸಾಧಕನಿಗೆ ಅದು ಅಮೃತಪ್ರಸಾದವನ್ನು ಅಭವಪ್ರಸಾದವನ್ನು ಆನಂದಪ್ರಸಾದವನ್ನು ಆ ಮೂಲಕ ಸಮರಸಪ್ರಸಾದವನ್ನು ಕರುಣಿಸುವುದು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.