ಹಲಬರ ನುಂಗಿದ ಹಾವಿಂಗೆ ತಲೆ ಬಾಲವಿಲ್ಲ, ನೋಡಾ:
ಕೊಲುವುದು ತ್ರೈಜಗವೆಲ್ಲವ, ತನಗೆ ಬೇರೆ ಪ್ರಳಯವಿಲ್ಲ;
ನಾಕಡಿಯನೈದುವುದು, ಲೋಕದ ಕಡೆಯನೆ ಕಾಣ್ಬುದು,
ಸೂಕ್ಷ್ಮ ಪಥದಲ್ಲಿ ನಡೆವುದು: ತನಗೆ ಬೇರೆ ಒಡಲಿಲ್ಲ;
ಅಹಮ್ಮೆಂಬ ಗಾರುಡಿಗನ ನುಂಗಿತ್ತು.
ಕೂಡಲಸಂಗನ ಶರಣರಲ್ಲದುಳಿದವರ!
Hindi Translationअनेकों को निगले हुए साँप के न सिर है, न पूँछ;
वह त्रिभुवन का संहार करता है, उसे कोई प्रलय नहीं;
चार डग चलता है, जगत का अंत ही देखता है;
वह सूक्ष्म पथ पर चलता है, उसके कोई शरीर नहीं है,
अहं रूपी गारुडी को निगल लिया,
कूडलसंगमदेव के शरणों कों छोड शेष सबों को भी ॥
Translated by: Banakara K Gowdappa
English Translation Behold, the snake that swallowed many a one,
Has neither head nor tail!
It kills the three worlds; but itself
Knows no destruction; it walks
Four steps and beholds
The end of the world; it walks
Along a subtle path, although
It has no body; it has swallowed up
The mountain bank whose name is 'I',
And all the rest, except
Kūḍala Saṅga's Śaraṇās !Translated by: L M A Menezes, S M Angadi
Tamil Translationபலரை விழுங்கிய பாம்பிற்குத் தலை
வால் இல்லை காணாய், மூவுலகில்
உள்ளோரைக் கொல்கிறது, தனக்கும் அழிவில்லை
நான்கு அவத்தைகளுடன் கூடியது
உலகியல் செயல்களையும் செய்கிறது
சூட்சுமமான வழியில் செல்கிறது
இதற்கு வேறு உடலில்லை பகட்டினரை
செருக்குற்றோரை கூடலசங்கனின் சரணர்
அல்லாதோரை விழுங்கியது அன்றோ!
Translated by: Smt. Kalyani Venkataraman, Chennai
Telugu Translationపలువర మ్రింగిన పాముకు తల తోక లేదురా;
ముంచు మూడు లోకముల తనకు వేలె ప్రళయము లేదు
నే కూల్ప కూలు; జగదంత్యమునే చూతు
సూక్ష్మ పథముననడతు తనకు వేఱె తనువు లేదు
అహంబను గరుడ మాంత్రికుని మ్రింగె;
సంగని శరణుల విడిచి మిగిలిన వారినెల్లా మ్రింగెకదరా!
Translated by: Dr. Badala Ramaiah
Urdu TranslationTranslated by: Hameed Almas
ಸ್ಥಲ -
ಶರಣನ ಜ್ಞಾನಿಸ್ಥಲವಿಷಯ -
ಅಹಂಕಾರ
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನಮೃತ್ಯುವೆಂಬ ಹೆಬ್ಬಾವಿಗೆ ತಲೆಯಿಲ್ಲ–ಆದರೆ ಹಲವರನ್ನು ಅದು ನುಂಗಿದೆ, ಬಾಲವಿಲ್ಲ–ಆದರೆ ಸರ್ವರನ್ನೂ ಸುತ್ತಿಹಿಡಿದಿದೆ. ಹೀಗೆ ಲೋಕ ಮೂರನ್ನೂ ಸಾಯಿಸುವ ಈ ಹಾವಿಗೆ ಮಾತ್ರ ಸಾವಿಲ್ಲ. ಅದು ಶೈಶವ ಬಾಲ್ಯ ಯೌವನ ವಾರ್ಧಕ್ಯವೆಂಬ ನಾಲ್ಕು ಹಂತದಲ್ಲಿಯೂ ವ್ಯಾಪಿಸಿಕೊಂಡಿರುವುದು, ಲೋಕ ಲೋಕಗಳ ತುತ್ತತುದಿಗೂ ಚಾಚಿಕೊಂಡಿರುವುದು. ತನಗೇ ಪ್ರತ್ಯೇಕವಾದ ಮೈಯಿಲ್ಲವಾಗಿ ಅದು ಎಲ್ಲಿ ನುಸುಳುವುದೋ ಎಲ್ಲಿ ಮೇಲೆ ಬೀಳುವುದೋ ಒಂದೂ ತಿಳಿಯದಂತಿರುವುದು. ಇದರ ಗುಣಕ್ರಿಯೆಗಳನ್ನು –“ನಾನು ಬಲ್ಲೆ, ನಾನು ಹಿಡಿಯಬಲ್ಲೆ”ನೆಂಬ ಸೋಹಮ್ಮಿನ ಜೊಮ್ಮಿನ ಸನ್ಯಾಸಿಗಳನ್ನೆಲ್ಲಾ ಒಂದೇ ತುತ್ತಿಗೆ ಅದು ನುಂಗುತ್ತದೆ. ಆದರೆ ಅಂಗವೆಲ್ಲಾ ಲಿಂಗವಾಗಿರುವ ದಾಸೋಹಂ ಪಂಥದ ಶಿವಶರಣರನ್ನು ಅದು ಮುಟ್ಟದು.
ವಿ : ಈ ಹಾವು ಮಾಯೆಗೂ ಪ್ರತೀಕವಾಗಿ ನಿಲ್ಲಬಲ್ಲುದು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.