ಆ ಭಸ್ಮ ತಾಗಿ ಬ್ರಹ್ಮ ತನ್ನ ಕಪಾಲವಿಡಿದನು;
ಗಣನಾಥನ ಐವತ್ತೆರಡು ಸರ ಹರಿದು ಬಿದ್ದವು!
ಆ ಭಸ್ಮ ತಾಗಿ ಅಂಡಜಮುಗ್ಧೆಯ ಮೂರು ಮೊಲೆ ಹರಿದು ಬಿದ್ದುವು;
ನಾದಪ್ರಿಯ ನಂದಿಯನೇರಿಕೊಂಡು
ಅತೀತನ ಮೇಲೆ ಆನಂದ ಸಿಂಹಾಸನವಿಕ್ಕಿ ಕುಳ್ಳಿತ್ತ;
ಕೂಡಲಸಂಗಮದೇವರ ದೇವತ್ವ ಕೆಟ್ಟಿತ್ತು!
Hindi Translationउस भस्म स्पर्श से ब्रह्मने अपना कपाल पकडा ।
गणनाथ की बावन मालाएँ टूटकर बिखर गईं ।
उस भस्म के स्पर्श से अंडज-मुग्धा के तीन स्तन कटकर गिर गये।
नादप्रिय नंदी पर आरूढ होकर,
अतीत पर आनंद-सिंहासन रखकर आसीन हुआ,
कूडलसंगमदेव का देवत्व नष्ट हुआ ॥
Translated by: Banakara K Gowdappa
English Translation Touching this ash, Brahma held up
His bowl of skull; the two-and-fifty strings
Of Gaṇanātha tore and fell;
Touching the ash, the triple breasts
Of the Egg-born imbecile tore and fell;
The lover of Nāda, mounting on his bull,
Set up his throne of joy
In the Beyond and sat thereon;
Godhood of Lord Kūḍala Saṅgama was undone!
Translated by: L M A Menezes, S M Angadi
Tamil TranslationTranslated by: Smt. Kalyani Venkataraman, Chennai
Telugu Translationఆ భస్మమంట బ్రహ్మ తన కపాలము పట్టె
గణనాధుని యాభై రెండు దండలు తెగిపడె
ఆ భస్మముదాక ఆండజముగ్ధకు మూడు చన్నులూడిపడె
నందినెక్కి నాదప్రియు డతీతునిపై ఆనంద
సింహాసనము పెట్టి కూర్చొనే సంగమదేవుని దివ్యత్వము చెడె.
Translated by: Dr. Badala Ramaiah
Urdu TranslationTranslated by: Hameed Almas
ಸ್ಥಲ -
ಐಕ್ಯನ ಐಕ್ಯಸ್ಥಲವಿಷಯ -
ದೇವರು
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನತ್ರಿಗುಣಾತ್ಮಕವಾದ ಈ ಪ್ರಕೃತಿಗೆ ಪರಮ ಜ್ಞಾನಾಗ್ನಿಯನ್ನು ಮುಟ್ಟಿಸಿದಾಗ ಎದ್ದ ಉರಿಹೊಗೆ ಮಹೇಶ್ವರ-ವಿಷ್ಣು-ಬ್ರಹ್ಮ-ರುದ್ರ ಮತ್ತು ಮಿಕ್ಕ ದೇವತೆಗಳ ಪಾಳೇಪಟ್ಟಿಗೆ ಒಳಪಟ್ಟು ಅಂಗಗುಣ ಮತ್ತು ಜೀವಭಾವ ಭಸ್ಮವಾಯಿತು. ಯಾರ ಹಾವಭಾವದಿಂದ ಇಡೀ ಈ ಸೃಷ್ಟಿ ವಿಕಸಿತವಾಯಿತೋ – ಆ ಕ್ರಿಯಾಶಕ್ತಿ ಜ್ಞಾನಶಕ್ತಿ ಇಚ್ಛಾಶಕ್ತಿ ಆದಿಶಕ್ತಿ ಪರಾಶಕ್ತಿಯರು ಐವರೂ ಸುರುಳಿ ಸುತ್ತಿ ಶಿವನೊಳಗಾದರು. ಶಿವನು ಭಸ್ಮಧಾರಿಯಾಗಿ ಭೈರಾಗಿಯಾದ.
ಆವಿಷ್ಕಾರಗೊಂಡ ವಿಶ್ವವನ್ನು ಮರಳಿ ಶಿವನು ತನ್ನಲ್ಲಿ ಉಪಸಂಹರಿಸಿಕೊಳ್ಳುವ ಅವನ ಲೀಲೆಯನ್ನು ಈ 932ನೇ ವಚನದಲ್ಲಿ ಬೆಡಗಿನಿಂದ ಚಿತ್ರಿಸಲಾಗಿದೆ.
ನಾಲ್ವರು ಹೊತ್ತು ತಂದ ಶವವು ಆ ನಾಲ್ವರು ಸಹಿತವಾಗಿ ದಹನವಾದ ಒಂದು ಅಪೂರ್ವ ಅಂತ್ಯ ಸಂಸ್ಕಾರದ ಪ್ರತಿಮೆ ಈ ವಚನದಲ್ಲಿ ಅಡಗಿರುವುದನ್ನು ಗುರುತಿಸಿ.
ವಿ : ಮಡದಿಯರೈವರು ಮುಡಿಯ ಹಿಡಿದುಕೊಂಡು ಹೋದರು ಎಂಬ ಮಾತನ್ನು ಗಮನಿಸಿ.
1. ಬ್ರಹ್ಮ ತನ್ನ ಕಪಾಲವಿಡಿದನು
2. ಗಣನಾಥನ 52 ಸರಿ ಹರಿದು ಬಿದ್ದವು
3. ಅಂಡಜಮುಗ್ದೆಯ 3 ಮೂಲೆ ಹರಿದು ಬಿದ್ದವು
4. ನಾದಪ್ರಿಯ ನಂದಿಯನೇರಿಕೊಂಡ
5. ಕೂ.ಸಂ. ದೇವರ ದೇವತ್ವ ಕೆಟ್ಟಿತ್ತು
ಶಿವನು ನಟರಾಜನಾಗಿ ಮಾಡಿದ ವಿಲಯದ ಒಂದು ಚಿತ್ರ 933ನೇ ವಚನದ ಮೇಲೆಣ ಸಾಲುಸಾಲಿನಲ್ಲಿ ಬಣ್ಣಬಣ್ಣವಾಗಿ ವರ್ಣಿತವಾಗಿದೆ.
ಮೇಲಿರುವ ಸಾಲುಗಳನ್ನು ಕ್ರಮವಾಗಿ ಈ ಮುಂದಿನಂತೆ ಒಡಚಬಹುದು :
1. ಸೃಷ್ಟಿಕರ್ತನು ತಲೆಗೆ ಕೈಕೊಟ್ಟು ಕುಳಿತನು. 2. ಜೀವನ ವರ್ಣಮಯ (ಅಕ್ಷರ) ವ್ಯವಹಾರ ವಿಸ್ತಾರ ಉಡುಗಿತು. 3. ಮಾಯೆಯ ತ್ರಿಗುಣಾತ್ಮಕ ವಿಲಾಸ ಕೊನೆಗೊಂಡಿತು. 4. ಶಿವನು ಸ್ವಸ್ಥಾನಾದ. 5. ಅಲ್ಲಿಗೆ ದೇವತ್ವ –ಜೀವತ್ವದ ವ್ಯವಸ್ಥೆ ನಿರ್ನಾಮವಾಯಿತು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.