ಅಯ್ಯಾ, ಆಸೆಯ ಪಾಶದಿಂದ ತೊಳಲಿತಯ್ಯ ಎನ್ನ ಕಾಯವು.
ಆಸೆ-ಆಮಿಷದಿಂದ ಹೊದಕುಳಿಗೊಂಡಿತಯ್ಯ ಎನ್ನ ಮನವು.
ಆಸೆಯೆಂಬ ಮರವೆಯಲ್ಲಿ ಮನೆಮಾಡಿತಯ್ಯ ಎನ್ನ ಪ್ರಾಣವು.
ಆಸೆಯೆಂಬ ಹೊಡೆಗಿಚ್ಚಿನಲ್ಲಿ ಹೊಡದಾಡಿ ಸತ್ತಿತಯ್ಯ ಎನ್ನ ಭಾವವು.
ಇನ್ನೆನಗೆ ಗತಿಯ ಪಥವ ತೋರಿಸಿ ರಕ್ಷಿಸಯ್ಯ,
ಭವಪಾಶರಹಿತ ಪರಬ್ರಹ್ಮಮೂರ್ತಿ ಶ್ರೀಗುರುಲಿಂಗಜಂಗಮವೆ
ಹರಹರ ಶಿವಶಿವ ಜಯಜಯ ಕರುಣಾಕರ
ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ.
Art
Manuscript
Music
Courtesy:
Transliteration
Ayyā, āseya pāśadinda toḷalitayya enna kāyavu.
Āse-āmiṣadinda hodakuḷigoṇḍitayya enna manavu.
Āseyemba maraveyalli manemāḍitayya enna prāṇavu.
Āseyemba hoḍegiccinalli hoḍadāḍi sattitayya enna bhāvavu.
Innenage gatiya pathava tōrisi rakṣisayya,
bhavapāśarahita parabrahmamūrti śrīguruliṅgajaṅgamave
harahara śivaśiva jayajaya karuṇākara
matprāṇanātha mahā śrīgurusid'dhaliṅgēśvara.