ಶ್ರೀಗುರುಲಿಂಗಜಂಗಮವೆ, ಶ್ರೀಗುರು ಲಿಂಗಜಂಗಮವೆ,
ಶ್ರೀಗುರು ಲಿಂಗಜಂಗಮವೆ.
ಕಾಯಯ್ಯ ಕಾಯಯ್ಯ ಕರುಣಾ[ಳುವೆ].
ಎನ್ನ ಅಜ್ಞಾನಮಾಯಾಪಾಶವ ಪರಿಹರಿಸಿ ರಕ್ಷಿಸಯ್ಯ
ಭವರೋಗ ವೈದ್ಯನೆ, ನಿಮ್ಮ ಧರ್ಮ ನಿಮ್ಮ ಧರ್ಮ.
ನಿಮ್ಮ ಚರಣಕಮಲವ ಮೊರೆಹೊಕ್ಕೆನಯ್ಯ.
ಹರಹರ ಶಿವಶಿವ ಜಯಜಯ ಕರುಣಾಕರ
ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ.