Index   ವಚನ - 19    Search  
 
ಜ್ಞಾನದಲರಿದಡೇನಯ್ಯ, ಕ್ರೀಯನಾಚರಿಸದನ್ನಕ್ಕ? ನೆನೆದ ಮಾತ್ರದಲ್ಲಿ ಅಹುದೆ, ಕಾರ್ಯದಲಲ್ಲದೆ? ಕುರುಡ ಕಾಣ ಪಥವ, ಹೆಳವ ನಡೆಯಲರಿಯ. ಒಂದಿಲ್ಲದಿರ್ದಡೊಂದಾಗದು. ಜ್ಞಾನವಿಲ್ಲದಿರ್ದ ಕ್ರೀ ಜಡನು, ಕ್ರೀಯಿಲ್ಲದ ಜ್ಞಾನ ವಾಗ್ಜಾಲ ಭ್ರಾಂತು. ಇದು ಕಾರಣ, ಸಿದ್ಧಸೋಮನಾಥಲಿಂಗವ ಕೂಡುವ ಶರಣಂಗೆ ಎರಡೂ ಬೇಕು.