Index   ವಚನ - 2    Search  
 
ಅನುದಿನಂಗಳೆಂಬವು ಪ್ರಣತೆಯಾಗಿ, ವರುಷವೆಂಬವು ಬತ್ತಿಯಾಗಿ, ಜೀವ ಜ್ಯೋತಿಯ ಬೆಳಗ ಬೆಳಗಿನಲರಿಯಬೇಕು. ಬೆಳಗುಳ್ಳಲ್ಲಿ ಆತ ನಡೆಸಿದಂತೆ ನಡೆಯಬೇಕು. ಬೆಳಗುಳ್ಳಲ್ಲಿ ಆತ ನುಡಿಸಿದಂತೆ ನುಡಿಯಬೇಕು. ಎಣ್ಣೆಯೆಂಬ ಜವ್ವನ ಸವೆಯದ ಮುನ್ನ, ಬೆಳಗು ಕತ್ತಲೆಯಾಗದ ಮುನ್ನ ರೇಕಣ್ಣಪ್ರಿಯ ನಾಗಿನಾಥಾ, ಬೆಳಗ ಬೆಳಗಿನಲರಿಯಬೇಕು.