Index   ವಚನ - 9    Search  
 
ಇಂದು ಬಂದ ಬಹುರೂಪವ ನೋಡಿರಯ್ಯಾ. ಗತಿಯ ಹೊದ್ದದೆ, ಮತಿಯ ಹೊದ್ದದೆ, ಸ್ಥಿತಿಯ ಹೊದ್ದದೆ ಸ್ಥಾನವ ಹೊದ್ದದೆ, ಐವರು ಕಟ್ಟಿದ ಕಟ್ಟಳೆಯ ಮೀರಿ ನಾನಾಡುವೆ ಬಹುರೂಪವ. ರೇಕಣ್ಣಪ್ರಿಯ ನಾಗಿನಾಥಾ ಬಸವಣ್ಣನಿಂದ ಬದುಕಿದೆ.