Index   ವಚನ - 11    Search  
 
ಇನ್ನಾಡುವೆ ಜಂಗಮ ಬಹುರೂಪ, ಕಲ್ಯಾಣವೆಲ್ಲಾ ಅರಿಯಬೇಕೆಂದು. ಎನ್ನ ಬಹುರೂಪ ಕಾಮ ಹೊಯ್ದುಕೊಂಡಿಯೆಂದಡೆ ಪ್ರಸಾದವ ಮಾಡಿಕೊಟ್ಟಡೆ ಇದು ಬಸವನ ಪ್ರಸಾದವೆಂದು ಕೈಕೊಂಡೆ ಕಾಣಾ. ರೇಕಣ್ಣಪ್ರಿಯ ನಾಗಿನಾಥಾ, ಬಸವನಿಂದ ಬದುಕಿತೀ ಲೋಕವೆಲ್ಲಾ.