Index   ವಚನ - 24    Search  
 
ಕೈದು ಮರದು ಕಾದುವ ಅಂಕವದೇನೊ ? ಭಾವ ಮರದು ನೋಡುವ ನೋಟವದೇನೊ ? ಭಯವ ಮರದು ಮಾಡುವ ಭಕ್ತಿಯದೇನೊ ? ರೇಕಣ್ಣಪ್ರಿಯ ನಾಗಿನಾಥನಲ್ಲಿ ಗುರುವ ಮರದು ಲಿಂಗವನೊಲಿಸಿದೆನೆಂದಡೆ ಆ ಉಭಯ ಗುರುಲಿಂಗವೆರಡೂ ಇಲ್ಲ.