Index   ವಚನ - 31    Search  
 
ಜಂಗಮಪ್ರಸಾದವರಿಯದ ಗುರುವಿನ ಕೈಯಲ್ಲಿ ಲಿಂಗಸಾಹಿತ್ಯವಾಗಲಾಗದಯ್ಯಾ. ಆದಡೆ ಆಗಲಿ, ಗುರುವನೆ ಸದಾಚಾರಿಯ ಮಾಡೂದು. ಶಿಕ್ಷಾಗುರು ಜಂಗಮದಲ್ಲಿ ಪ್ರಸಾದವ ಕೊಂಡೆಹೆನೆಂದಡೆ ಆ ಜಂಗಮ ಜಂಗಮಪ್ರಸಾದಿಯಲ್ಲದಿರ್ದಡೆ ಆ ಪ್ರಸಾದವ ಮುಟ್ಟಲಾಗದು. ರೇಕಣ್ಣಪ್ರಿಯ ನಾಗಿನಾಥಲಿಂಗವು ಆಗುಹೋಗನರಿಯನಾಗಿ ಬಸವಣ್ಣನ ಕೂಡಿ ಆಡಿ ಪ್ರಸಾದಿಯಾದನಾಗಿ ಇತ್ತ ಬಾ ಎಂದು ಕೈವಿಡಿದು ತೆಗೆದುಕೊಂಬುದು.