Index   ವಚನ - 32    Search  
 
ಜಂಗಮದ ಪ್ರಸಾದವ ಲಿಂಗಕ್ಕೆ ಕೊಡಬಾರದೆಂಬ ಕರ್ಮಿಯ ಮಾತ ಕೇಳಲಾಗದು. ಅದೆಂತೆಂದಡೆ: ಅದು ಪವಿತ್ರವಾದ ಕಾರಣ ಪವಿತ್ರವೆನಿಸುವ ಮೂರ್ತಿ ಮಹಾಜಂಗಮದ ಪಾದತೀರ್ಥ ಪ್ರಸಾದವ ಲಿಂಗಕ್ಕೆ ಸಮರ್ಪಿಸಿ ಪ್ರಸಾದಭೋಗೋಪಭೋಗಿಯಾಗಿರ್ಪ ಭಕ್ತನೆ ಬಸವಣ್ಣ. ಅದಲ್ಲದೆ ಅಪವಿತ್ರವ ಲಿಂಗಕ್ಕೆ ಸಮರ್ಪಿಸಲಾಗದು. ಅದೆಂತೆಂದಡೆ-ಸಾಕ್ಷಿ: ಜಂಗಮಂ ಚ ಪ್ರಸಾದಂತು ನಿವೇದ್ಯಂ ಚ ಸಮರ್ಪಣಂ| ಪ್ರಸಾದಿ ಸತ್ಯ ಶುದ್ಧಾತ್ಮ ಪ್ರಸಾದಿಸ್ಥಲಮುತ್ತಮಂ|| ಇಂತಲ್ಲದೆ ಅಪವಿತ್ರದ್ರವ್ಯವ, ಉಚ್ಫಿಷ್ಟ ಚಾಂಡಾಲ ಕಾಯವ ಮುಟ್ಟಿ ಪವಿತ್ರಲಿಂಗಕ್ಕೆ ಅರ್ಪಿಸಿ ಭುಂಜಿಸುವ ಚಾಂಡಾಲನ ಮುಖವ ನೋಡಲಾಗದು, ರೇಕಣ್ಣಪ್ರಿಯ ನಾಗಿನಾಥಾ.