ಜಂಗಮದ ಪ್ರಸಾದವ ಲಿಂಗಕ್ಕೆ ಕೊಡಬಾರದೆಂಬ
ಕರ್ಮಿಯ ಮಾತ ಕೇಳಲಾಗದು. ಅದೆಂತೆಂದಡೆ:
ಅದು ಪವಿತ್ರವಾದ ಕಾರಣ ಪವಿತ್ರವೆನಿಸುವ ಮೂರ್ತಿ
ಮಹಾಜಂಗಮದ ಪಾದತೀರ್ಥ ಪ್ರಸಾದವ ಲಿಂಗಕ್ಕೆ ಸಮರ್ಪಿಸಿ
ಪ್ರಸಾದಭೋಗೋಪಭೋಗಿಯಾಗಿರ್ಪ ಭಕ್ತನೆ ಬಸವಣ್ಣ.
ಅದಲ್ಲದೆ ಅಪವಿತ್ರವ ಲಿಂಗಕ್ಕೆ ಸಮರ್ಪಿಸಲಾಗದು.
ಅದೆಂತೆಂದಡೆ-ಸಾಕ್ಷಿ:
ಜಂಗಮಂ ಚ ಪ್ರಸಾದಂತು ನಿವೇದ್ಯಂ ಚ ಸಮರ್ಪಣಂ|
ಪ್ರಸಾದಿ ಸತ್ಯ ಶುದ್ಧಾತ್ಮ ಪ್ರಸಾದಿಸ್ಥಲಮುತ್ತಮಂ||
ಇಂತಲ್ಲದೆ ಅಪವಿತ್ರದ್ರವ್ಯವ,
ಉಚ್ಫಿಷ್ಟ ಚಾಂಡಾಲ ಕಾಯವ ಮುಟ್ಟಿ
ಪವಿತ್ರಲಿಂಗಕ್ಕೆ ಅರ್ಪಿಸಿ ಭುಂಜಿಸುವ
ಚಾಂಡಾಲನ ಮುಖವ ನೋಡಲಾಗದು,
ರೇಕಣ್ಣಪ್ರಿಯ ನಾಗಿನಾಥಾ.
Art
Manuscript
Music
Courtesy:
Transliteration
Jaṅgamada prasādava liṅgakke koḍabārademba
karmiya māta kēḷalāgadu. Adentendaḍe:
Adu pavitravāda kāraṇa pavitravenisuva mūrti
mahājaṅgamada pādatīrtha prasādava liṅgakke samarpisi
prasādabhōgōpabhōgiyāgirpa bhaktane basavaṇṇa.
Adallade apavitrava liṅgakke samarpisalāgadu.
Adentendaḍe-sākṣi:
Jaṅgamaṁ ca prasādantu nivēdyaṁ ca samarpaṇaṁ|
prasādi satya śud'dhātma prasādisthalamuttamaṁ||
intallade apavitradravyava,
ucphiṣṭa cāṇḍāla kāyava muṭṭi
pavitraliṅgakke arpisi bhun̄jisuva
cāṇḍālana mukhava nōḍalāgadu,
rēkaṇṇapriya nāgināthā.