Index   ವಚನ - 34    Search  
 
ನನಗೆ ನಾನೆ ಗುರುವಾದೆನಯ್ಯಾ. ನನಗೆ ನಾನೆ ಲಿಂಗವಾದೆನಯ್ಯಾ. ನನಗೆ ನಾನೆ ಜಂಗಮವಾದೆನಯ್ಯಾ. ನನಗೆ ನಾನೆ ಪ್ರಸಾದವಾದೆನಯ್ಯಾ. ನನಗೆ ನಾನೆ ಭಕ್ತನಾದೆನಯ್ಯಾ. ರೇಕಣ್ಣಪ್ರಿಯ ನಾಗಿನಾಥನಲ್ಲಿಆಗುಹೋಗನರಿಯೆನಯ್ಯಾ.