Index   ವಚನ - 38    Search  
 
ಪ್ರಣವಮಂತ್ರರೂಪ ಪರಶಿವನ ಚೈತನ್ಯ ಎಲ್ಲಾ ಮಂತ್ರಂಗಳಿಗೆ ಚೈತನ್ಯವು. ಎಲ್ಲಾ ತಂತ್ರಂಗಳಿಗೆ ಚೈತನ್ಯವು. ಓಂಕಾರಂ ವ್ಯಾಪ್ತಿ ಸರ್ವತ್ರಂ ಓಂಕಾರಂ ಗೋಪ್ಯ ಮಾನವಂ| ಓಂಕಾರಂ ನಾದರೂಪಂ ಚ ಓಂಕಾರಂ ಮಂತ್ರರೂಪಕಂ|| ಎಂದು, ಎಲ್ಲಾ ವೇದಂಗಳಿಗೆ ತಾನೆ ಚೈತನ್ಯವು. ಇಂತಲ್ಲದಡೆ, ಎಲ್ಲಿಹದು ಜ್ಞಾನಸಾಮರ್ಥ್ಯವು. ಅದು ಕಾರಣ, ಮಂತ್ರವೆ ಅವಯವವು ರೇಕಣ್ಣಪ್ರಿಯ ನಾಗಿನಾಥಂಗೆ.