Index   ವಚನ - 3    Search  
 
ಆವ ಪ್ರಾಣಿಗೆಯೂ ನೋವ ಮಾಡಬೇಡ. ಪರನಾರಿಯರ ಸಂಗ ಬೇಡ. ಪರಧನಕ್ಕಳುಪಬೇಡ, ಪರದೈವಕ್ಕೆರಗಬೇಡ. ಈ ಚತುರ್ವಿಧ ತವಕವ ಮಾಡುವಾಗ ಪರರು ಕಂಡಾರು, ಕಾಣರು ಎಂದೆನಬೇಡ. ಬಳ್ಳೇಶ್ವರಲಿಂಗಕ್ಕಾರು ಮರೆಮಾಡಬಾರದಾಗಿ ಅಘೋರನರಕದಲ್ಲಿಕ್ಕುವ.