ಕವಿ ಕವಿಗಳೆಂದು ಹೆಸರಿಟ್ಟುಕೊಂಡು ನುಡಿವ
ಅಣ್ಣಗಳು ನೀವು ಕೇಳಿರೋ.
ತಮ್ಮಂಗ ಪಾಕುಳದೊಳಗಿದ್ದು ಆಕಾಶ ಮುಖಕ್ಕೆ
ನಡಸಬಲ್ಲರೆ ಕವಿಗಳೆಂದೆನಿಸಿಕೊಳಬಹುದು.
ನಾಲ್ಕು ಪವನವನೊಂದುಮಾಡಿ ಬೀಜವಿಲ್ಲದ
ಅಂಕುಂರಮಂ ತುಂಬಿ ಕುಕೂರ್ಮನೆಂಬ ಜಾಡ್ಯವನುಳಿದು
ಇಂತವರಿಗಲ್ಲದೆ ಛಂದ ಅಮರಸಿಂಹ ನಿಘಂಟು
ವ್ಯಾಕರಣದ ಮಡಕೆಯ ಹಂಚ ಹಿಡಿದು
ಆರಾರ ಮನೆಯಲ್ಲಿ ತಿರಿದುಂಬ
ಶಿವದ್ರೋಹಿಗಳ ನೋಡಿ ನಗುತಿರ್ದ
ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ
ರಾಜೇಶ್ವರ ಲಿಂಗವು ಅವರ ಬಲ್ಲವನಾಗಿ ಒಲ್ಲನು.
Art
Manuscript
Music
Courtesy:
Transliteration
Kavi kavigaḷendu hesariṭṭukoṇḍu nuḍiva
aṇṇagaḷu nīvu kēḷirō.
Tam'maṅga pākuḷadoḷagiddu ākāśa mukhakke
naḍasaballare kavigaḷendenisikoḷabahudu.
Nālku pavanavanondumāḍi bījavillada
aṅkunramaṁ tumbi kukūrmanemba jāḍyavanuḷidu
intavarigallade chanda amarasinha nighaṇṭu
vyākaraṇada maḍakeya han̄ca hiḍidu
ārāra maneyalli tiridumba
śivadrōhigaḷa nōḍi nagutirda
basavaṇṇapriya viśvakarmaṭakke kāḷikāvimala
rājēśvara liṅgavu avara ballavanāgi ollanu.