ಘೋರಾರಣ್ಯದ ಮಧ್ಯದಲ್ಲಿ
ಮೇಲುಗಿರಿ ಪರ್ವತವೆಂಬ ಅಗ್ರದ ಕೊನೆಯ ಮೇಲೆ
ಭಕ್ತಿಜ್ಞಾನವೈರಾಗ್ಯವೆಂಬ ಅಂಗಮಂಡಲದೊಳಗೆ
ಮೂವತ್ತಾರು ಮಾಣಿಕ್ಯದ ಕಂಬದ ಮಂಟಪದೊಳಗೆ
ಸಚ್ಚಿದಾನಂದ ದಿವ್ಯಪರಂಜ್ಯೋತಿಯನಿಕ್ಕಿ ನೋಡಲು ಅದನೇನೆನ್ನಬಹುದು.
ಒಳಗೆ ನೆನೆಯದೆ, ಹೊರಗೆ ಮುಟ್ಟದೆ ಬೆಳಗು ಬೆಳಗ ಕೂಡಿದಂತೆ
ಆಕಾಶ ಮಹದಾಕಾಶವ ಕೂಡಿದಂತೆ
ಆ ನುಡಿಗೆಡೆಯಿಲ್ಲದ ಬೆಡಗಿನ ಕೀಲ ಕಳಚಬಲ್ಲಡೆ
ಮತ್ತೆ ಅರಸಲಿಲ್ಲ,
ಬಸವಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವ.