[ನಿರಾಳ ನಿಶ್ಚಿಂ]ತ ನಿರಾಭಾರಿ ನಿಸ್ಸೀಮನಿಗೆ
ಅಗೋಚರ ಶರಣಂಗೆ
ಪರಂಜ್ಯೋತಿರ್ಲಿಂಗ ಪ್ರತ್ಯಕ್ಷವಾಗಿ ತೋರಿದ ಕ್ರಮವೆಂತೆಂದಡೆ:
ಪಂಚರತ್ನವೆಂಬ [ಶಿಲಾ] ರತ್ನಮಂಟಪದೊಳಗೆ
ಬೆಳಗುವದೊಂದು ಮುತ್ತಿನ ಪಾಣಿವಟ್ಟವುಂಟು.
ಅದರ ಮಸ್ತಕದ ಮೇಲೊಂದು ಅಮೃತದ ಕಂಕಣವುಂಟು
ಆ ಕಂಕಣದೊಳಗೊಂದು ನಿಶ್ಚಿಂತಾಮೃತವೆಂಬ ಕಮಲವುಂಟು.
ಆ ಕಮಲದೊಳಗೊಂದು ಮಹಾರತ್ನಪ್ರಕಾಶವೆಂಬುದೊಂದು
ಪ್ರಾಣಲಿಂಗ ಬೆಳಗುತ್ತಿಹದು.
ಆ ರತ್ನಮಂಟಪದೊಳಗೆ ಮಹಾಸ್ಫಟಿಕದ ಭಾಜನವುಂಟು.
ಆ ಭಾಜನದೊಳಗೆ ಜೀವ ನವಪರಬ್ರಹ್ಮನವಗವಿಸಿತ್ತು.
ಆ ಬ್ರಹ್ಮವೆ ತಾನೋ, ನಾನೋ ? ಎಂದು ವಿಚಾರಿಸಿ ನೋಡಿದಡೆ
ಗೋಳಕಾಕಾರ ಸ್ವಯಂಪ್ರಕಾಶ ವಸ್ತು ಎಂದಾತ
ನಮ್ಮ ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ
ಕಾಳಿಕಾವಿಮಲ ರಾಜೇಶ್ವರಲಿಂಗವು ತಾನು ತಾನಾದ ಶರಣ.
Art
Manuscript
Music
Courtesy:
Transliteration
[Nirāḷa niściṁ]ta nirābhāri nis'sīmanige
agōcara śaraṇaṅge
paran̄jyōtirliṅga pratyakṣavāgi tōrida kramaventendaḍe:
Pan̄caratnavemba [śilā] ratnamaṇṭapadoḷage
beḷaguvadondu muttina pāṇivaṭṭavuṇṭu.
Adara mastakada mēlondu amr̥tada kaṅkaṇavuṇṭu
ā kaṅkaṇadoḷagondu niścintāmr̥tavemba kamalavuṇṭu.
Ā kamaladoḷagondu mahāratnaprakāśavembudondu
prāṇaliṅga beḷaguttihadu.
Ā ratnamaṇṭapadoḷage mahāsphaṭikada bhājanavuṇṭu.
Ā bhājanadoḷage jīva navaparabrahmanavagavisittu.
Ā brahmave tānō, nānō? Endu vicārisi nōḍidaḍe
gōḷakākāra svayamprakāśa vastu endāta
nam'ma basavaṇṇapriya viśvakarmaṭakke
kāḷikāvimala rājēśvaraliṅgavu tānu tānāda śaraṇa.