ಊರಿಗೆ ಹೋಹಾತ ದಾರಿಯ ಭಯಂಗಳನರಿದು
ಆರೈಕೆಯಿಂದ ಹೋಗಬೇಕು.
ಕುರಿತ ಕುರುಹ ಹಿಡಿವನ್ನಕ್ಕ ಭೇದ ವಿವರವ ಸೋದಿಸಬೇಕು.
ಸೋದಿಸಿ ಸ್ವಸ್ಥವಾಗಿ ನಿಜನಿಂದಲ್ಲಿ
ಉಭಯದ ಕುರುಹು ಅನಾದಿಯಲ್ಲಿ ಅಡಗಿತ್ತು.
ಅಡಗಿದ ಮತ್ತೆ ವೀರಶೂರ ರಾಮೇಶ್ವರಲಿಂಗವ ಕುರುಹಿಡಲಿಲ್ಲ.
Art
Manuscript
Music
Courtesy:
Transliteration
Ūrige hōhāta dāriya bhayaṅgaḷanaridu
āraikeyinda hōgabēku.
Kurita kuruha hiḍivannakka bhēda vivarava sōdisabēku.
Sōdisi svasthavāgi nijanindalli
ubhayada kuruhu anādiyalli aḍagittu.
Aḍagida matte vīraśūra rāmēśvaraliṅgava kuruhiḍalilla.