Index   ವಚನ - 3    Search  
 
ಕಂಡುದೆಲ್ಲವೂ ಜಗದ ಸೊಮ್ಮು. ಕಾಣುದದೆಲ್ಲವೂ ಮಾಯೆಯ ಸೊಮ್ಮು. ಕಂಡುದ, ಕಾಣದುದ ತಾ ನಿಧಾನಿಸಿಕೊಂಡು ತನಗಿಲ್ಲದುದ ತಾನರಿದು, ನಷ್ಟವಪ್ಪುದ ಜಗಕ್ಕೆ ಕೊಟ್ಟು ಬಟ್ಟಬಯಲ ತುಟ್ಟತುದಿಯ ದೃಷ್ಟವ ಕಾಬುದಕ್ಕೆ ಮುನ್ನವೆ ದೃಕ್ಕು ದೃಶ್ಯಕ್ಕೆ ಹೊರಗಾಗಬೇಕು, ವೀರಶೂರ ರಾಮೇಶ್ವರಲಿಂಗವ ಕೂಡಬಲ್ಲಡೆ.