Index   ವಚನ - 4    Search  
 
ಕನ್ನಗತ್ತಿ ಮಣ್ಣ ಕೆಡಹಿದ ಬಳಿಕ ಮಣ್ಣ ತೆಗೆಯಬಲ್ಲುದೆ ? ಇಂತೀ ಉಭಯಾನುಭಾವಬೇಕು. ಕನ್ನವ ಸವೆದ ಕತ್ತಿ ಕಳಬಲ್ಲುದೆ ? ಇಂತೀ ಬಿನ್ನಾಣದ ದೃಷ್ಟವ ತಿಳಿದು ಅರಿವುದ ಅರುಹಿಸಿಕೊಂಬುದೆ ? ಅರಿದ ಅರಿವ ಅರಿವನ್ನಕ್ಕ ವೀರಶೂರ ರಾಮೇಶ್ವರಲಿಂಗವ ಅರ್ಚಿಸುತ್ತ, ಪೂಜಿಸುತ್ತ ಚಿತ್ತಶುದ್ಧನಾಗಿರಬೇಕು.