ಅಂಥ ಬ್ರಹ್ಮಾಂಡವ ನಾಲವತ್ತೈದುಲಕ್ಷದ ಮೇಲೆ
ಸಾವಿರದಾ ನಾನೂರಾ ನಲವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಸರ್ವವೆಂಬ ಭುವನ.
ಆ ಭುವನದೊಳು ಸರ್ವೇಶ್ವರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಏಳುನೂರಿಪ್ಪತ್ತು ಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು.
ಏಳುನೂರಿಪ್ಪತ್ತು ಕೋಟಿ ವೇದಪುರುಷರು ಮುನೀಂದ್ರರು
ಚಂದ್ರಾದಿತ್ಯರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ.