ಅಂಥ ಬ್ರಹ್ಮಾಂಡವ ಅರುವತ್ತೊಂದು ಲಕ್ಷದ ಮೇಲೆ
ಸಾವಿರಾದಾ ಆರನೂರಾ ಎಂಟು
ಬ್ರಹ್ಮಾಂಡವನೊಳಕೊಂಡುದೊಂದು ಕಪರ್ದಿಯೆಂಬ ಭುವನ.
ಆ ಭುವನದೊಳು ಕಾಲನಾಶನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಎಂಟುನೂರುಕೋಟಿ ಬ್ರಹ್ಮ-ನಾರಾಯಣ-ರುದ್ರರಿಹರು.
ಎಂಟುನೂರುಕೋಟಿ ವೇದಪುರುಷರು ಮುನೀಂದ್ರರು
ಇಂದ್ರಚಂದ್ರಾದಿತ್ಯರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Antha brahmāṇḍava aruvattondu lakṣada mēle
sāvirādā āranūrā eṇṭu
brahmāṇḍavanoḷakoṇḍudondu kapardiyemba bhuvana.
Ā bhuvanadoḷu kālanāśanemba rudramūrti ihanu.
Ā rudramūrtiya ōlagadalli
eṇṭunūrukōṭi brahma-nārāyaṇa-rudrariharu.
Eṇṭunūrukōṭi vēdapuruṣaru munīndraru
indracandrādityaru dēvarkaḷiharu nōḍā
apramāṇakūḍalasaṅgamadēvā.