Index   ವಚನ - 161    Search  
 
ಅಂಥ ಬ್ರಹ್ಮಾಂಡವ ಅರವತ್ತು ಲಕ್ಷದ ಮೇಲೆ ಸಾವಿರದಾ ಐನೂರಾತೊಂಬತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಮೇಘವಾಹನವೆಂಬ ಭುವನ. ಆ ಭುವನದೊಳು ಚಂಡಮಾರುತನೆಂಬ ಮಹಾರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಏಳುನೂರಾತೊಂಬತ್ತೈದು ಕೋಟಿ ನಾರಾಯಣ-ರುದ್ರ-ಬ್ರಹ್ಮ-ಇಂದ್ರಾದಿಗಳಿಹರು ನೋಡಾ. ಏಳುನೂರಾ ತೊಂಬತ್ತೈದು ಕೋಟಿ ವೇದಪುರುಷರು ಮುನೀಂದ್ರರು ಚಂದ್ರಾದಿತ್ಯರು ದೇವರ್ಕಳಿಹರು ನೋಡಾ. ಅಪ್ರಮಾಣಕೂಡಲಸಂಗಮದೇವಾ.