Index   ವಚನ - 169    Search  
 
ಅಂಥ ಬ್ರಹ್ಮಾಂಡವ ಅರುವತ್ತೆಂಟುಲಕ್ಷದ ಮೇಲೆ ಸಾವಿರದಾ ಆರುನೂರಾ ಎಪ್ಪತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಲಘುವೆಂಬ ಭುವನ. ಆ ಭುವನದೊಳು ಅಕ್ಷಪಾದನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಎಂಟುನೂರಾ ಮೂವತ್ತುಕೋಟಿ ನಾರಾಯಣ ಬ್ರಹ್ಮ ರುದ್ರರಿಹರು. ಎಂಟುನೂರಾಮೂವತ್ತೈದುಕೋಟಿ ದೇವರ್ಕಳಿಹರು ವೇದಪುರುಷರು ಮುನೀಂದ್ರರು ಚಂದ್ರಾದಿತ್ಯರು ಇಂದ್ರರಿಹರು ನೋಡಾ. ಅಪ್ರಮಾಣಕೂಡಲಸಂಗಮದೇವಾ.