Index   ವಚನ - 168    Search  
 
ಅಂಥ ಬ್ರಹ್ಮಾಂಡವ ಅರುವತ್ತೇಳು ಲಕ್ಷದ ಮೇಲೆ ಸಾವಿರದಾ ಆರುನೂರಾ ಅರುವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ವಾಯುವೇಗವೆಂಬ ಭುವನ. ಆ ಭುವನದೊಳು ಭೂತನಾಥನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಎಂಟುನೂರಾ ಮೂವತ್ತುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು. ಎಂಟುನೂರಾ ಮೂವತ್ತುಕೋಟಿ ಇಂದ್ರ-ಚಂದ್ರಾದಿತ್ಯರು, ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.