ಅಂಥ ಬ್ರಹ್ಮಾಂಡವ ಎಪ್ಪತ್ತೆಂಟುಲಕ್ಷದ ಮೇಲೆ
ಸಾವಿರದೇಳುನೂರಾ ಎಪ್ಪತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಅತಿಬಲವೆಂಬ ಭುವನ.
ಆ ಭುವನದೊಳು ಮಹಾಮಗುಟನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಎಂಟುನೂರಾ ಎಂಬತ್ತೈದುಕೋಟಿ
ಬ್ರಹ್ಮ ಇಂದ್ರ ನಾರಾಯಣ ರುದ್ರರಿಹರು.
ಎಂಟುನೂರಾ ಎಂಬತ್ತೈದುಕೋಟಿ ಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Antha brahmāṇḍava eppatteṇṭulakṣada mēle
sāviradēḷunūrā eppatteṇṭu
brahmāṇḍavanoḷakoṇḍudondu atibalavemba bhuvana.
Ā bhuvanadoḷu mahāmaguṭanemba rudramūrti ihanu.
Ā rudramūrtiya ōlagadalli
eṇṭunūrā embattaidukōṭi
brahma indra nārāyaṇa rudrariharu.
Eṇṭunūrā embattaidukōṭi candrādityaru
vēdapuruṣaru munīndraru dēvarkaḷiharu nōḍā
apramāṇakūḍalasaṅgamadēvā.