Index   ವಚನ - 180    Search  
 
ಅಂಥ ಬ್ರಹ್ಮಾಂಡವ ಎಪ್ಪತ್ತೊಂಬತ್ತುಲಕ್ಷದ ಮೇಲೆ ಸಾವಿರದೇಳುನೂರಾ ಎಂಬತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಮಹಾಬಲವೆಂಬ ಭುವನ. ಆ ಭುವನದೊಳು ಮಹೇಶ್ವರನೆಂಬ ಮಹಾರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಎಂಟುನೂರಾ ತೊಂಬತ್ತುಕೋಟಿ ನಾರಾಯಣ ರುದ್ರ ಬ್ರಹ್ಮ ಇಂದ್ರಾದಿಗಳಿಹರು ನೋಡಾ. ಎಂಟುನೂರಾ ತೊಂಬತ್ತುಕೋಟಿ ವೇದಪುರುಷರು ಮುನೀಂದ್ರರು ಚಂದ್ರಾದಿತ್ಯರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.