Index   ವಚನ - 185    Search  
 
ಅಂಥ ಬ್ರಹ್ಮಾಂಡವ ಎಂಬತ್ತುನಾಲ್ಕುಲಕ್ಷದ ಮೇಲೆ ಸಾವಿರದ ಎಂಟುನೂರಾಮೂವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ವಿರೂಪಾಕ್ಷವೆಂಬ ಭುವನ. ಆ ಭುವನದೊಳು ನಿರಾಕಾರನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಒಂಬಯಿನೂರಾಹದಿನೈದುಕೋಟಿ ನಾರಾಯಣ ಬ್ರಹ್ಮ ರುದ್ರಾದಿಗಳಿಹರು. ಒಂಬಯಿನೂರಾಹದಿನೈದುಕೋಟಿ ವೇದಪುರುಷರು ಮುನೀಂದ್ರರು ಇಂದ್ರಚಂದ್ರಾದಿತ್ಯರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.