ಅಂಥ ಬ್ರಹ್ಮಾಂಡವ ಎಂಬತ್ತಾರುಲಕ್ಷದ ಮೇಲೆ
ಸಾವಿರದ ಎಂಟುನೂರಾ ಐವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದುಉಭಯನಖವೆಂಬ ಭುವನ.
ಆ ಭುವನದೊಳು ಉಪಮಾತೀತನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಒಂಬಯಿನೂರಾ ಇಪ್ಪತ್ತೈದು ಕೋಟಿ
ಬ್ರಹ್ಮ ನಾರಾಯಣ ರುದ್ರಾದಿಗಳಿಹರು ನೋಡಾ.
ಒಂಬಯಿನೂರಾ ಇಪ್ಪತ್ತೈದು ಕೋಟಿ ಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ