ಅಂಥ ಬ್ರಹ್ಮಾಂಡವ ಆರುಕೋಟಿಯ ಮೇಲೆ
ಎರಡು ಸಾವಿರದಾ ನಲವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು
ಹುತಾಶನವೆಂಬ ಭುವನ.
ಆ ಭುವನದೊಳು ಅತಿಮಹಾಘೋರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಸಾವಿರಕೋಟಿಯ ಮೇಲೆ ಮೂವತ್ತುಕೋಟಿ
ಬ್ರಹ್ಮ-ನಾರಾಯಣ-ರುದ್ರರಿಹರು.
ಸಾವಿರಕೋಟಿಯ ಮೇಲೆ ಐವತ್ತುಕೋಟಿ ವೇದಪುರುಷರು
ಮುನೀಂದ್ರರು ದೇವರ್ಕಳಿಹರು ನೋಡಾ.
ಅಪ್ರಮಾಣಕೂಡಲಸಂಗಮದೇವಾ.