ಅಂಥ ಬ್ರಹ್ಮಾಂಡವ ಎಂಟುಕೋಟಿಯ ಮೇಲೆ
ಎರಡುಸಾವಿರದಾ ಅರವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು
ತ್ರಿದಶಾಧಿಪವೆಂಬ ಭುವನ.
ಆ ಭುವನದೊಳು ಅಘೋರವೀರನೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಸಾವಿರಕೋಟಿಯ ಮೇಲೆ ಎಪ್ಪತ್ತುಕೋಟಿ
ರುದ್ರ ಬ್ರಹ್ಮ ನಾರಾಯಣರಿಹರು.
ಸಾವಿರಕೋಟಿಯ ಮೇಲೆ ಎಪ್ಪತ್ತುಕೋಟಿ ಇಂದ್ರಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ.