ಅಂಥ ಬ್ರಹ್ಮಾಂಡವ ಒಂಬತ್ತುಕೋಟಿಯ ಮೇಲೆ
ಎರಡು ಸಾವಿರದಾ ಎಪ್ಪತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು
ಪಿನಾಕಿಯೆಂಬ ಭುವನ.
ಆ ಭುವನದೊಳು ಮಹಾಘೋರವೀರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಸಾವಿರ ಕೋಟಿಯ ಮೇಲೆ ಎಂಬತ್ತು ಕೋಟಿ
ಬ್ರಹ್ಮ ನಾರಾಯಣ ರುದ್ರರಿಹರು.
ಸಾವಿರ ಕೋಟಿಯ ಮೇಲೆ ಎಂಬತ್ತು ಕೋಟಿ ವೇದಪುರುಷರು
ಇಂದ್ರಚಂದ್ರಾದಿತ್ಯರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ.