Index   ವಚನ - 209    Search  
 
ಅಂಥ ಬ್ರಹ್ಮಾಂಡವ ಒಂಬತ್ತುಕೋಟಿಯ ಮೇಲೆ ಎರಡು ಸಾವಿರದಾ ಎಪ್ಪತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಪಿನಾಕಿಯೆಂಬ ಭುವನ. ಆ ಭುವನದೊಳು ಮಹಾಘೋರವೀರನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಸಾವಿರ ಕೋಟಿಯ ಮೇಲೆ ಎಂಬತ್ತು ಕೋಟಿ ಬ್ರಹ್ಮ ನಾರಾಯಣ ರುದ್ರರಿಹರು. ಸಾವಿರ ಕೋಟಿಯ ಮೇಲೆ ಎಂಬತ್ತು ಕೋಟಿ ವೇದಪುರುಷರು ಇಂದ್ರಚಂದ್ರಾದಿತ್ಯರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.