Index   ವಚನ - 208    Search  
 
ಅಂಥ ಬ್ರಹ್ಮಾಂಡವ ಎಂಟುಕೋಟಿಯ ಮೇಲೆ ಎರಡುಸಾವಿರದಾ ಅರವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ತ್ರಿದಶಾಧಿಪವೆಂಬ ಭುವನ. ಆ ಭುವನದೊಳು ಅಘೋರವೀರನೆಂಬ ಮಹಾರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಸಾವಿರಕೋಟಿಯ ಮೇಲೆ ಎಪ್ಪತ್ತುಕೋಟಿ ರುದ್ರ ಬ್ರಹ್ಮ ನಾರಾಯಣರಿಹರು. ಸಾವಿರಕೋಟಿಯ ಮೇಲೆ ಎಪ್ಪತ್ತುಕೋಟಿ ಇಂದ್ರಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.