ಅಂಥ ಬ್ರಹ್ಮಾಂಡವ ಮೂವತ್ತುಕೋಟಿಯ ಮೇಲೆ
ಎರಡು ಸಾವಿರದಾ ಎಂಟು ಬ್ರಹ್ಮಾಂಡವನೊಳಕೊಂಡುದೊಂದು
ವಿಭೂತಿಯೆಂಬ ಭುವನ.
ಆ ಭುವನದೊಳು ಅನಾದಿಯೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಸಾವಿರಕೋಟಿಯ ಮೇಲೆ ಇನ್ನೂರುಕೋಟಿ ವೇದಪುರುಷರು
ಮುನೀಂದ್ರರು ಇಂದ್ರಚಂದ್ರಾದಿತ್ಯರು ದೇವರ್ಕಳಿಹರು ನೋಡಾ.
ಸಾವಿರಕೋಟಿಯ ಮೇಲೆ ಇನ್ನೂರು ಕೋಟಿ
ಬ್ರಹ್ಮ ನಾರಾಯಣ ರುದ್ರರಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ.