ಅಂಥ ಬ್ರಹ್ಮಾಂಡವ ತೊಂಬತ್ತುಕೋಟಿಯ ಮೇಲೆ
ಮೂರುಸಾವಿರದಾ ಅರುವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು
ರುದ್ರವೆಂಬ ಭುವನ.
ಆ ಭುವನದೊಳು ಅನಂತಲೋಚನನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಸಾವಿರಕೋಟಿಯ ಮೇಲೆ ಎಪ್ಪತ್ನಾಲ್ಕುನೂರಾ ಅರುವತ್ತುಕೋಟಿ
ರುದ್ರ ಬ್ರಹ್ಮ ನಾರಾಯಣ ಇಂದ್ರರಿಹರು.
ಸಾವಿರಕೋಟಿಯ ಮೇಲೆ ಇಪ್ಪತ್ತುನಾಲ್ಕುನೂರಾ ಅರುವತ್ತುಕೋಟಿ
ಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ.