Index   ವಚನ - 217    Search  
 
ಅಂಥ ಬ್ರಹ್ಮಾಂಡವ ಎಂಬತ್ತುಕೋಟಿಯ ಮೇಲೆ ಮೂರುಸಾವಿರದಾ ಐವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಈಶ್ವರವೆಂಬ ಭುವನ. ಆ ಭುವನದೊಳು ಸದಾಶಿವನೆಂಬ ಮಹಾರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಸಾವಿರ ಕೋಟಿಯ ಮೇಲೆ ಹನ್ನೆರಡನೂರಾ ಅರುವತ್ತುಕೋಟಿ ಬ್ರಹ್ಮ ರುದ್ರ ನಾರಾಯಣರಿಹರು. ಸಾವಿರ ಕೋಟಿಯ ಮೇಲೆ ಹನ್ನೆರಡುನೂರಾ ಅರವತ್ತುಕೋಟಿ ವೇದಪುರುಷರು ಮುನೀಂದ್ರರು ಇಂದ್ರಚಂದ್ರಾದಿತ್ಯರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.