Index   ವಚನ - 220    Search  
 
ಅಂಥ ಬ್ರಹ್ಮಾಂಡವ ಇನ್ನೂರು ಕೋಟಿಯ ಮೇಲೆ ಮೂರುಸಾವಿರದಾ ತೊಂಬತ್ತೆಂಟು ಬ್ರಹ್ಮಾಂಡನೊಳಕೊಂಡುದೊಂದು ಬ್ರಹ್ಮನೆಂಬ ಭುವನ. ಆ ಭುವನದೊಳು ವೇದನಾಥನೆಂಬ ಮಹಾರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಸಾವಿರಕೋಟಿಯ ಮೇಲೆ ತೊಂಬತ್ತುನೂರಾ ನಾಲ್ವತ್ನಾಲ್ಕುಕೋಟಿ ನಾರಾಯಣ ರುದ್ರ ಬ್ರಹ್ಮರಿಹರು ನೋಡಾ. ಸಾವಿರ ಕೋಟಿಯ ಮೇಲೆ ತೊಂಬತ್ತುನೂರಾ ನಾಲ್ವತ್ನಾಲ್ಕುಕೋಟಿ ವೇದಪುರುಷರು ಮುನೀಂದ್ರರು ಇಂದ್ರಚಂದ್ರಾದಿತ್ಯರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.