Index   ವಚನ - 226    Search  
 
ಆ ಅಖಂಡ ಮಹಾಮೂಲಸ್ವಾಮಿಯ ಅಂಗ-ಪ್ರತ್ಯಂಗ-ಸ್ವರೂಪ-ಸ್ವಭಾವಂಗಳನರಿಯದೆ ಅನಂತಕೋಟಿ ಬ್ರಹ್ಮ-ನಾರಾಯಣರಳಿದರು ನೋಡಾ. ಆ ಅಖಂಡ ಮಹಾಮೂಲಸ್ವಾಮಿಯ ಅಂಗ-ಪ್ರತ್ಯಂಗ-ಸ್ವರೂಪ-ಸ್ವಭಾವಂಗಳನರಿಯದೆ ಅನಂತಕೋಟಿ ರುದ್ರ-ಈಶ್ವರ-ಸದಾಶಿವ ಮೊದಲಾದ ಅನಂತಕೋಟಿ ದೇವರ್ಕಳು ಅಳಿದರು ನೋಡಾ. ಆ ಅಖಂಡ ಮಹಾಮೂಲಸ್ವಾಮಿಯ ಅಂಗ-ಪ್ರತ್ಯಂಗ-ಸ್ವರೂಪ-ಸ್ವಭಾವಂಗಳನರಿಯದೆ ಅನಂತಕೋಟಿ ವೇದಂಗಳು, ಅನಂತಕೋಟಿ ಮನುಮುನಿಗಳು, ಅನಂತಕೋಟಿ ಲೋಕಾದಿಲೋಕದವರೆಲ್ಲ ಪ್ರಳಯಕ್ಕೊಳಗಾದರು ನೋಡಾ. ಆ ಅಖಂಡ ಮಹಾಮೂಲಸ್ವಾಮಿಯ ಅಂಗ-ಪ್ರತ್ಯಂಗ-ಸ್ವರೂಪ-ಸ್ವಭಾವಂಗಳ ಈ ಲೋಕದ ಜಡರೆತ್ತ ಬಲ್ಲರಯ್ಯ ಅಪ್ರಮಾಣಕೂಡಲಸಂಗಮದೇವಾ.