ಇನ್ನು ವಿಶ್ವಾಧಿಕ ಮಹಾರುದ್ರನುತ್ಪತ್ಯವೆಂತೆಂದಡೆ:
ಅನಂತ ಬ್ರಹ್ಮಾಂಡ ಅನಂತ ಕೋಟಿ ಲೋಕಧರನಾದ
ಪರಾಪರನಾದ ಮಹಾಸದಾಶಿವನಾದವನು ತನ್ನ
ನಿಜಜ್ಞಾನ ಹಿರಿಣ್ಯಗರ್ಭದಲ್ಲಿ
ವಿಶ್ವಾಧಿಕ ಮಹಾರುದ್ರನಂ ನಿರ್ಮಿಸಿ ತನ್ನ ಪಂಚಮುಖದಿಂದ
ಪೃಥ್ವಿ ತೇಜ ವಾಯುವಾಕಾಶವೆಂಬ ಮಹಾಭೂತ ಬ್ರಹ್ಮಾಂಡದೊಳು
ಚತುರ್ದಶ ಭುವನಂಗಳು, ಸಪ್ತ ಕುಲಪರ್ವತಂಗಳು ಮೊದಲಾದ
ಅನಂತ ಗಿರಿ ಗಹ್ವರಂಗಳಂ, ಸಮಸ್ತ ಗ್ರಹರಾಶಿ ತಾರಾಪಥಂಗಳಂ
ಗರ್ಭೀಕರಿಸಿಕೊಂಡು ನಿರ್ಮಿಸೆಂದು ಬೆಸನಂ ಕೊಟ್ಟು ಕಳುಹಲು,
ಮಹಾಪ್ರಸಾದವೆಂದು ಕೈಕೊಂಡು
ಆ ಭೂತಬ್ರಹ್ಮಾಂಡದೊಳು ನಿರ್ಮಿಸಿದನೆಂತೆಂದಡೆ:
ಜಲದ ಮೇಲೆ ಕಮಠನ ನಿರ್ಮಿಸಿದ.
ಆ ಕಮಠನ ಮೇಲೆ ಮಹಾವಾಸುಗಿಯಂ ನಿರ್ಮಿಸಿದ.
ಆ ಮಹಾವಾಸುಗಿಯ ಮೇಲೆ ಅಷ್ಟದಿಗ್ಗಜಂಗಳ ನಿರ್ಮಿಸಿದನು
ಆ ವಿಶ್ವಾಧಿಕ ಮಹಾರುದ್ರನು. ಆ ಅಷ್ಟದಿಗ್ಗಜಂಗಳ ಮೇಲೆ
ಸಕಲವಾದ ಜೀವಂಗಳಿಗೂ ಸಕಲವಾದ ಪದಾರ್ಥಂಗಳಿಗೂ
ಇಹಂತಾಗಿ ಮಹಾಪೃಥ್ವಿಯಂ ನಿರ್ಮಿಸಿದನು ವಿಶ್ವಾಧಿಕಮಹಾರುದ್ರನು.
ಮಹಾಮೇರುಪರ್ವತದ ತಾವರೆಯ ನಡುವಣ ಪೀಠಿಕೆಯ ಕ್ರಮದಲ್ಲಿ
ನಡೆಯ ಪ್ರಮಾಣು ಹದಿನಾರು ಸಾವಿರದ ಯೋಜನ ಪ್ರಮಾಣು.
ಉದ್ದ ಎಂಬತ್ನಾಲ್ಕು ಸಾವಿರ ಯೋಜನದುದ್ದ.
ವಿಸ್ತೀರ್ಣ ಮೂವತ್ತೆರಡು ಸಾವಿರಯೋಜನ ಪ್ರಮಾಣು
ಉಂಟಾಗಿಹಂತಾಗಿ ಮೇರುತನಕ ಸುತಾಳ ತಾಳ,
ಪಂಚಾಶತಕೋಟಿ ಸೋಪಾನಂಗಳುಂಟಾಗಿ ದಿವ್ಯರೂಪಾಗಿ ನಿರ್ಮಿಸಿದನು.
ಆ ಮೇರುವಿನ ಪೂರ್ವದೆಸೆಯಲ್ಲಿ ಪದ್ಮರಾಗವು,
ಆಗ್ನೆಯಲ್ಲಿ ವಜ್ರ, ದಕ್ಷಿಣದಲ್ಲಿ ಮೌಕ್ತಿಕ,
ನೈರುತ್ಯಭಾಗದಲ್ಲಿ ನೀಲ, ಪಶ್ಚಿಮದ ದೆಸೆಯ ವಿಭಾಗದಲ್ಲಿ ವೈಡೂರ್ಯ,
ವಾಯುವ್ಯದಲ್ಲಿ ಚಿಂತಾಮಣಿ, ಉತ್ತರದಲ್ಲಿ ರತ್ನಕನಕ,
ಈಶಾನ್ಯದಲ್ಲಿ ತಾಮ್ರ, ಮೇರುವಿನ ಮಧ್ಯದಲ್ಲಿ ಪುಷ್ಯರಾಗ
ಜ್ಞಾನ ದೃಷ್ಟಿಗಳುಂಟಾಗಿ ಪರಿಪೂರಿತಗಳಿಹಂತಾಗಿ
ಗಿರಿಯ ನಿರ್ಮಿಸಿದನು ವಿಶ್ವಾಧಿಕಮಹಾರುದ್ರನು.
ಆ ಮೇರುವಿನ ಮೇಲುಳ್ಳ ವೃಕ್ಷಂಗಳೆಲ್ಲ ಕಲ್ಪವೃಕ್ಷಂಗಳು.
ಆ ಮೇರುವಿನ ಮೇಲುಳ್ಳ ಮೃಗಂಗಳೆಲ್ಲ ಅಚಾಮಚರಿತ್ರಂಗಳು.
ಆ ಮೇರುವಿನ ಮೇಲುಳ್ಳ ಗೋವೆಲ್ಲ ಕಾಮಧೇನುಗಳು.
ಅಲ್ಲಿದ್ದ ಮನುಷ್ಯರೆಲ್ಲ ಪರಮಾತ್ಮರು.
ಅಲ್ಲಿದ್ದ ಸ್ತ್ರೀಯರೆಲ್ಲ ದೇವಸ್ತ್ರೀಯರು.
ಆಹಾರಂಗಳೆಲ್ಲ ಅಮೃತಾಹಾರ, ನೀರೆಲ್ಲ ರಜಸ್ತಳೇಯ;
ಅಲ್ಲಿಯ ಮಣ್ಣೆಲ್ಲ ಕಸ್ತೂರಿ ಕುಂಕುಮಾದಿಗಳೆನಿಸಿಕೊಂಬುದು.
ಅಲ್ಲಿಯ ಕಾಷ್ಠಂಗಳೆಲ್ಲ ಸುಗಂಧಂಗಳು.
ಆ ಮೇರುವಿನ ದೇವತೆಗಳಿಗೂ ಮುನಿಗಳಿಗೂ ಅನಂತ ಸಿದ್ಧರಿಗೂ
ಅನಂತ ಯೋಗಿಗಳಿಗೂ ಜೋಗಿಗಳಿಗೂ
ಪುರಂಗಳು ಗೃಹಂಗಳು ಗುಡಿಗಳು ಬಿಲದ್ವಾರಂಗಳುಂಟಾಗಿ
ನಿರ್ಮಿಸಿದನು ವಿಶ್ವಾಧಿಕಮಹಾರುದ್ರನು.
ಆ ಮಹಾಮೇರುವಿಗೆ ನಾಲ್ಕು ಬಾಗಿಲು,
ಎಂಟು ಸ್ವರ್ಣಕಂಡಿಗಳು, ಹದಿನಾರು ಮಕರತೋರಣಗಳು,
ಮೂವತ್ತೆರಡು ಸೋಮವೀದಿಗಳು, ಅರವತ್ನಾಲ್ಕು ಸಂದುಗಳುಂಟಾಗಿ
ಸರ್ವಸಂಪೂರ್ಣವಾಗಿ ನಿರ್ಮಿಸಿದನು ವಿಶ್ವಾಧಿಕಮಹಾರುದ್ರನು.
ಆ ಮಹಾಮೇರುವಿನ ಮಧ್ಯದಲ್ಲಿ ಶ್ರೀ ಮಹಾದೇವರಿಗೆ
ಶಿವಪುರಮಂ ನಿರ್ಮಿಸಿದನು.
ಪಂಚಸಹಸ್ರಯೋಜನ ಚತುಃಚಕ್ರಾಕಾರವಾಗಿ,
ನವರತ್ನಖಚಿತವಾಗಿ, ಅಷ್ಟದಳವೇಷ್ಟಿತವಾಗಿ,
ಅಷ್ಟಧ್ವಾನಂಗಳುಂಟಾಗಿ, ಶತಸಹಸ್ರಕೋಟಿ ಕನಕಗೃಹಂಗಳುಂಟಾಗಿ.
ಪ್ರಮಥಗಣಂಗಳು, ನಂದಿ, ಮಹಾನಂದಿಕೇಶ್ವರ ಮಹಾಗಣಂಗಳು
ಅಷ್ಟದಿಕ್ಪಾಲರು, ಏಕಾದಶರುದ್ರರು, ದ್ವಾದಶಾದಿತ್ಯರು,
ನವಗ್ರಹಂಗಳು, ಬ್ರಹ್ಮ ವಿಷ್ಣು ನಾರದ ಸುಖದಲ್ಲಿಪ್ಪಂತಾಗಿ
ನಿರ್ಮಿಸಿದನು ವಿಶ್ವಾಧಿಕಮಹಾರುದ್ರನು.
ಆ ಮೇರುವಿನ ಬಲದ ದೆಸೆಯಲ್ಲಿ ಬ್ರಹ್ಮಪುರವು
ತ್ರಿಕೋಣಾಕಾರವಾಗಿ ಅನಿಲಪ್ರಕಾರವೇಷ್ಟಿತವಾಗಿ,
ಅಷ್ಟದ್ವಾರಂಗಳುಂಟಾಗಿ ಐನೂರು ಕೋಟಿ ಕನಕಗೃಹಂಗಳು
ಅಸಂಖ್ಯಾತಕೋಟಿ ಮಹಾಋಷಿಗಳು ಒಡ್ಡೋಲಂಗಗೊಟ್ಟು,
ನಾಲ್ಕು ವೇದಂಗಳು ಮೂರ್ತಿಬಾಂಧವರಾಗಿ
ಸರಸ್ವತಿಸಮೇತವಾಗಿ ಬ್ರಹ್ಮದೇವರು
ಪರಮಾನಂದಸುಖದೊಳಿಪ್ಪಂತಾಗಿ ನಿರ್ಮಿಸಿದನು
ವಿಶ್ವಾಧಿಕಮಹಾರುದ್ರನು.
ಆ ಮೇರುವಿನ ವಾಮಭಾಗದಲ್ಲಿ ವಿಷ್ಣುವಿಂಗೆ ವೈಕುಂಠವೆಂಬ ಪುರ
ಚಕ್ರಾಕಾರವಾಗಿ ಪದ್ಮರಾಗಪ್ರಕಾಶವೇಷ್ಟಿತವಾಗಿ
ಅಷ್ಟದ್ವಾರಂಗಳು ಹತ್ತುನೂರುಕೋಟಿ ಕನಕಗೃಹಂಗಳುಂಟಾಗಿ
ಅನಂತಕೋಟಿ ಶಂಕ ಚಕ್ರ ಗದಾಹಸ್ತನಾಗಿ ವೇದ ಓಲೈಸಲಾಗಿ
ಶ್ರೀಲಕ್ಷ್ಮೀ ಸಮೇತನಾಗಿ ವಿಷ್ಣು ಪರಮಾನಂದಸುಖದಲ್ಲಿಪ್ಪಂತೆ
ನಿರ್ಮಿಸಿದನು ವಿಶ್ವಾಧಿಕಮಹಾರುದ್ರನು.
ಆ ಮೇರುವಿನ ಪೂರ್ವದೆಸೆಯಲ್ಲಿ
ದೇವೇಂದ್ರಂಗೆ ಅಮರಾವತಿಯ ಪುರಮಂ ನಿರ್ಮಿಸಿದನು.
ಆಗ್ನೇಯ ದೆಸೆಯಲ್ಲಿ ಅಗ್ನಿದೇವಂಗೆ ತೇಜೋವತಿಪುರಮಂ ನಿರ್ಮಿಸಿದನು
ವಿಶ್ವಾಧಿಕಮಹಾರುದ್ರನು.
ದಕ್ಷಿಣದಿಶಾಭಾಗದಲ್ಲಿ ಯಮದೇವಂಗೆ
ಸಿಂಹಾವತಿಯ ಪುರಮಂ ನಿರ್ಮಿಸಿದನು.
ನೈಋತ್ಯ ದಿಶಾಭಾಗದಲ್ಲಿ ನೈಋತ್ಯಂಗೆ ಕೃಷ್ಣವತಿಪುರಮಂ ನಿರ್ಮಿಸಿದನು
ವಿಶ್ವಾಧಿಕಮಹಾರುದ್ರನು.
ಪಶ್ಚಿಮ ದಿಶಾಭಾಗದಲ್ಲಿ ವರುಣಂಗೆ ಜಂಜನಿತಪುರಮಂ ನಿರ್ಮಿಸಿದನು.
ವಾಯುವ್ಯದಲ್ಲಿ ವಾಯುವಿಂಗೆ ಗಂಗಾವತಿಯಪುರಮಂ ನಿರ್ಮಿಸಿದನು
ವಿಶ್ವಾಧಿಕಮಹಾರುದ್ರನು.
ಉತ್ತರದೆಶೆಯಲ್ಲಿ ಕುಬೇರಂಗೆ ಅಳಕಾಪುರಮಂ ನಿರ್ಮಿಸಿದನು.
ಈಶಾನ್ಯದಿಶಾಭಾಗದಲ್ಲಿ ಈಶಾನ್ಯದೇವಂಗೆ
ಧವಳಾವತಿಪುರಮಂ ಮೊದಲಾಗಿ
ಸಮಸ್ತವಾದ ಪುರಗಳಂ ನಿರ್ಮಿಸಿದನು ವಿಶ್ವಾಧಿಯಕಮಹಾರುದ್ರನು.
ಆ ಮಹಾಮೇರುವಿಂಗೆ ವಳಯಾಕೃತವಾಗಿ
ಲವಣ ಇಕ್ಷು ಸುರೆ ಘೃತ ದಧಿ ಕ್ಷೀರ ಶುದ್ಧಜಲಂಗಳೆಂಬ
ಸಪ್ತಸಮುದ್ರಂಗಳಂ ನಿರ್ಮಿಸಿದನು ವಿಶ್ವಾಧಿಕಮಹಾರುದ್ರನು.
ಆ ಸಮುದ್ರಂಗಳ ನಡುವೆ ಜಂಬೂದ್ವೀಪ, ಪ್ಲಕ್ಷದ್ವೀಪ,
ಶುಕ್ಲದ್ವೀಪ, ಕುಶದ್ವೀಪ, ಶಾಕದ್ವೀಪ, ಶಾಲ್ಮಲೀದ್ವೀಪ,
ಪುಷ್ಕರದ್ವೀಪ, ಕ್ರೌಂಚದ್ವೀಪವೆಂಬ
ಸಪ್ತದ್ವೀಪಂಗಳ ನಿರ್ಮಿಸಿದನು ವಿಶ್ವಾಧಿಕಮಹಾರುದ್ರನು.
ಆ ದ್ವೀಪಂಗಳಿಗೆ ವಳಯಾಕೃತವಾಗಿ
ಮಲಯಜಪರ್ವತ, ನೀಲಪರ್ವತ,
ಶ್ವೇತಪರ್ವತ, ಋಕ್ಷಪರ್ವತ, ರಮ್ಯಪರ್ವತ,
ಉತ್ತರಕುರುಪರ್ವತ, ಸುಗಂಧಪರ್ವತ, ನಿರಾಕಾರಪರ್ವತ,
ಉದಾರಪರ್ವತ, ಮಣಿಶಿಖರಪರ್ವತ, ಅರ್ಧಚಂದ್ರಪರ್ವತ,
ಮಧುರಪರ್ವತ, ಮಣಿನಾಗಪರ್ವತ, ಮೈನಾಕಪರ್ವತ,
ಉದಯಾದ್ರಿಪರ್ವತ, ತ್ರಿಪುರಾಂತಕಪರ್ವತ, ಶ್ರೀರಾಮಪರ್ವತ,
ಮಾಲ್ಯವಂತಪರ್ವತ, ನಿಷಧಪರ್ವತ, ಹೇಮಕೂಟಪರ್ವತ,
ನಿರಾಚಲಪರ್ವತ, ಗಂಧಾಚಲಪರ್ವತ,
ನೀಲಾಚಲಪರ್ವತ, ಮಂದಾಚಲಪರ್ವತ, ಮೇರುಮಂದಿರಪರ್ವತ,
ಶುಬರೀಶ್ವರಪರ್ವತ, ಕುಮುದಉದಯಾದ್ರಿ, ದೇವಕೂಟ, ವಿಂಧ್ಯಾಚಲ,
ಪವನಾಚಲ, ಪರಿಯಾಚಲ, ಚಂದ್ರಾಚಲ, ಧಾರಾಚಲ, ಷಡುಲಕ್ಷ್ಮಿಗಿರಿ,
ಮಾನಸಾಂತಗಿರಿ, ತಮಂಧಗಿರಿ, ಚಂದ್ರಗಿರಿ, ನಾಗಗಿರಿ, ಲಘುಗಿರಿ,
ಮಕರಗಿರಿ, ದ್ರೋಣಗಿರಿ, ಅನಂತವಜ್ರಗಿರಿ, ಕಪಿಲಗಿರಿ, ನೀಲಗಿರಿ,
ಪರಗಿರಿ, ತ್ರಿಪುರಗಿರಿ, ಸಿಂಹಗಿರಿ, ಶ್ರೀಕಂಠಗಿರಿ, ಚಕ್ರವಾಳಗಿರಿಪರ್ವತ,
ಇಂದ್ರಗಿರಿಪರ್ವತ, ಲೋಕಪರ್ವತಂಗಳು ಮೊದಲಾದ
ಪರ್ವತಂಗಳೆಲ್ಲವಂ ನಿರ್ಮಿಸಿದನು ವಿಶ್ವಾಧಿಕಮಹಾರುದ್ರನು.
ಇದಕ್ಕೆ ದೇಶಂಗಳಾಗಬೇಕೆಂದು
ಪಾಂಚಾಲ, ಬರ್ಬರ, ಮತ್ಸ್ಯ, ಮಗಧ, ಮಲೆಯಾಳ,
ತೆಲುಂಗ, ಕಳಿಂಗ, ಕುಕರ, ಕೊಂಕಣ, ತ್ರಿಕರರಾಷ್ಟ್ರ,
ಶ್ವಾಸಿನಿ, ಕಂಠರಹಿತ, ಕುತಿಷ್ಟ, ದಶಾರ್ಣ, ಕುರು,
ಮುಖಸರ, ಕೌಸಯಿವರ್ಣ, ಆವಂತಿ, ಲಾಳ,
ಮಹೇಂದ್ರ, ಪಾಂಡ್ಯ, ಸರ್ವೇಶ್ವರ, ವಿಷ್ಣು,
ಶಾಂತಕ, ತುರಾದ್ರ, ಮಗಧಾದ್ರ,
ವಿದೇಹ, ಮಗಧ, ದ್ರವಿಳ, ಕಿರಾಂತ, ಕುಂತಳ, ಕಾಮೀರ, ಗಾಂಧಾರ,
ಕಾಂಭೋಜ, ಕೀಳುಗುಜ್ಜರ, ಅತಿದೃಷ್ಟ, ನೇಪಾಳ, ಬಂಗಾಳ,
ಪುಳಿಂದ್ರ, ಜಾಳೇಂದ್ರ, ಕಲ್ವರ-ಇಂಥಾ ದೇಶಂಗಳೆಲ್ಲವಂ
ನಿರ್ಮಿಸಿದನು ವಿಶ್ವಾಧಿಕಮಹಾರುದ್ರನು.
ಇನ್ನು ಭೂಮಿಯಿಂದಂ ಮೇಲೆ ಮೇಘಮಂಡಲ ಮೊದಲಾಗಿ
ಶಿವಾಂಡ ಚಿದ್ಬ್ರಹ್ಮಾಂಡ ಕಡೆಯಾಗಿ ಎಲ್ಲಾ ಲೋಕಂಗಳಂ ನಿರ್ಮಿಸಿ,
ಸಪ್ತಪಾತಾಳವ ನಿರ್ಮಿಸಿದನದೆಂತೆಂದಡೆ:
ಅಲ್ಲಿ ಪೃಥ್ವಿಯ ಕೆಳಗೆ ಶತಕಯೋಜನದಲ್ಲಿ
ಅತಳಲೋಕದಲ್ಲಿ ಇಶಿತಮಂಡಲಮಂ ನಿರ್ಮಿಸಿದನು.
ಅತಳಲೋಕದಿಂದಂ ಕೆಳಗೆ ಕೋಟಿಯೋಜನದುದ್ದದಲ್ಲಿ
ವಿತಳಲೋಕದಲ್ಲಿ ಸ್ವರ್ಣ ನಾಗಮಂಡಲಮಂ
ನಿರ್ಮಿಸಿದನು ವಿಶ್ವಾಧಿಕಮಹಾರುದ್ರನು.
ಆ ವಿತಳಲೋಕದಿಂದಲು ಕೆಳಗೆ ದ್ವಿಕೋಟಿ ಯೋಜನದುದ್ದದಲ್ಲಿ
ಸುತಳತೋಲಕದಲ್ಲಿ ಕೃಷ್ಣನಾಗಮಂಡಲಮಂ ನಿರ್ಮಿಸಿದನು.
ಆ ಸುತಳಲೋಕದಿಂದಲು ಕೆಳಗೆ ರಸಾತಳಲೋಕದಲ್ಲಿ
ರತ್ನನಾಗಮಂಡಲಮಂ ನಿರ್ಮಿಸಿದನು ವಿಶ್ವಾಧಿಕಮಹಾರುದ್ರನು.
ಆ ರಸಾತಳಲೋಕದಿಂದಲು ಕೆಳಗೆ ಚತುಃಕೋಟಿ ಯೋಜನದುದ್ದದಲ್ಲಿ
ಮಹಾತಳಲೋಕದಿಂದಲು ಕೆಳಗೆ ಶತಕೋಟಿ ಯೋಜನದುದ್ದದಲ್ಲಿ
ಪಾತಾಳಲೋಕದಲ್ಲಿ ಅವಿಷ್ಟಕೆ ಆಧಾರವಾಗಿ ಕಮಠನಂ
ನಿರ್ಮಿಸಿದನು ವಿಶ್ವಾಧಿಕಮಹಾರುದ್ರನು.
ಆ ಕಮಠನ ಮೇಲೆ ಜಲಂಗಳಂ, ಕಮಲಂಗಳಂ,
ಮಹಾಪೃಥ್ವಿಯಂ, ಮೇರುಪರ್ವತ ಸಮಸ್ತದೇವಾಸುರಂಗಳಂ
ಮಹಾಪೃಥ್ವಿಯು ಸಮಸ್ತ ಸಪ್ತಸಮುದ್ರಂಗಳಂ,
ಸಪ್ತದ್ವೀಪಂಗಳಂ ಮೊದಲಾದ ಲೋಕಾದಿಲೋಕ ಪರ್ವತಂಗಳ
ನಿರ್ಮಿಸಿದನು ವಿಶ್ವಾಧಿಕಮಹಾರುದ್ರನು.
ಆ ವಿತಳಲೋಕದಿಂದಲೂ ಕೆಳಗೆ ದ್ವಿಕೋಟಿ ಯೋಜನದುದ್ದದಲ್ಲಿ
ಅತಳ ವಿತಳ ಸುತಳ ರಸಾತಳ ತಳಾತಳ ಮಹಾತಳ ಪಾತಾಳ
ಭೂಲೋಕ, ಭುವರ್ಲೋಕ, ಸ್ವರ್ಲ
Art
Manuscript
Music
Courtesy:
Transliteration
Innu viśvādhika mahārudranutpatyaventendaḍe:
Ananta brahmāṇḍa ananta kōṭi lōkadharanāda
parāparanāda mahāsadāśivanādavanu tanna
nijajñāna hiriṇyagarbhadalli
viśvādhika mahārudranaṁ nirmisi tanna pan̄camukhadinda
pr̥thvi tēja vāyuvākāśavemba mahābhūta brahmāṇḍadoḷu
caturdaśa bhuvanaṅgaḷu, sapta kulaparvataṅgaḷu modalāda
ananta giri gahvaraṅgaḷaṁ, samasta graharāśi tārāpathaṅgaḷaṁ
garbhīkarisikoṇḍu nirmisendu besanaṁ koṭṭu kaḷuhalu,
Mahāprasādavendu kaikoṇḍu
ā bhūtabrahmāṇḍadoḷu nirmisidanentendaḍe:
Jalada mēle kamaṭhana nirmisida.
Ā kamaṭhana mēle mahāvāsugiyaṁ nirmisida.
Ā mahāvāsugiya mēle aṣṭadiggajaṅgaḷa nirmisidanu
ā viśvādhika mahārudranu. Ā aṣṭadiggajaṅgaḷa mēle
sakalavāda jīvaṅgaḷigū sakalavāda padārthaṅgaḷigū
ihantāgi mahāpr̥thviyaṁ nirmisidanu viśvādhikamahārudranu.
Mahāmēruparvatada tāvareya naḍuvaṇa pīṭhikeya kramadalli
naḍeya pramāṇu hadināru sāvirada yōjana pramāṇu.
Udda embatnālku sāvira yōjanadudda.
Vistīrṇa mūvatteraḍu sāvirayōjana pramāṇu
uṇṭāgihantāgi mērutanaka sutāḷa tāḷa,
pan̄cāśatakōṭi sōpānaṅgaḷuṇṭāgi divyarūpāgi nirmisidanu.
Ā mēruvina pūrvadeseyalli padmarāgavu,
āgneyalli vajra, dakṣiṇadalli mauktika,
nairutyabhāgadalli nīla, paścimada deseya vibhāgadalli vaiḍūrya,
vāyuvyadalli cintāmaṇi, uttaradalli ratnakanaka,
īśān'yadalli tāmra, mēruvina madhyadalli puṣyarāga
jñāna dr̥ṣṭigaḷuṇṭāgi paripūritagaḷihantāgi
giriya nirmisidanu viśvādhikamahārudranu.
Ā mēruvina mēluḷḷa vr̥kṣaṅgaḷella kalpavr̥kṣaṅgaḷu.
Ā mēruvina mēluḷḷa mr̥gaṅgaḷella acāmacaritraṅgaḷu.
Ā mēruvina mēluḷḷa gōvella kāmadhēnugaḷu.
Allidda manuṣyarella paramātmaru.
Allidda strīyarella dēvastrīyaru.
Āhāraṅgaḷella amr̥tāhāra, nīrella rajastaḷēya;
alliya maṇṇella kastūri kuṅkumādigaḷenisikombudu.
Alliya kāṣṭhaṅgaḷella sugandhaṅgaḷu.
Ā mēruvina dēvategaḷigū munigaḷigū ananta sid'dharigū
ananta yōgigaḷigū jōgigaḷigū
puraṅgaḷu gr̥haṅgaḷu guḍigaḷu biladvāraṅgaḷuṇṭāgi
nirmisidanu viśvādhikamahārudranu.
Ā mahāmēruvige nālku bāgilu,
eṇṭu svarṇakaṇḍigaḷu, hadināru makaratōraṇagaḷu,
mūvatteraḍu sōmavīdigaḷu, aravatnālku sandugaḷuṇṭāgi
sarvasampūrṇavāgi nirmisidanu viśvādhikamahārudranu.
Ā mahāmēruvina madhyadalli śrī mahādēvarige
śivapuramaṁ nirmisidanu.
Pan̄casahasrayōjana catuḥcakrākāravāgi,
navaratnakhacitavāgi, aṣṭadaḷavēṣṭitavāgi,
aṣṭadhvānaṅgaḷuṇṭāgi, śatasahasrakōṭi kanakagr̥haṅgaḷuṇṭāgi.
Pramathagaṇaṅgaḷu, nandi, mahānandikēśvara mahāgaṇaṅgaḷu
aṣṭadikpālaru, ēkādaśarudraru, dvādaśādityaru,
Navagrahaṅgaḷu, brahma viṣṇu nārada sukhadallippantāgi
nirmisidanu viśvādhikamahārudranu.
Ā mēruvina balada deseyalli brahmapuravu
trikōṇākāravāgi anilaprakāravēṣṭitavāgi,
aṣṭadvāraṅgaḷuṇṭāgi ainūru kōṭi kanakagr̥haṅgaḷu
asaṅkhyātakōṭi mahā'r̥ṣigaḷu oḍḍōlaṅgagoṭṭu,
nālku vēdaṅgaḷu mūrtibāndhavarāgi
sarasvatisamētavāgi brahmadēvaru
paramānandasukhadoḷippantāgi nirmisidanu
viśvādhikamahārudranu.Ā mēruvina vāmabhāgadalli viṣṇuviṅge vaikuṇṭhavemba pura
cakrākāravāgi padmarāgaprakāśavēṣṭitavāgi
aṣṭadvāraṅgaḷu hattunūrukōṭi kanakagr̥haṅgaḷuṇṭāgi
anantakōṭi śaṅka cakra gadāhastanāgi vēda ōlaisalāgi
śrīlakṣmī samētanāgi viṣṇu paramānandasukhadallippante
nirmisidanu viśvādhikamahārudranu.
Ā mēruvina pūrvadeseyalli
dēvēndraṅge amarāvatiya puramaṁ nirmisidanu.
Āgnēya deseyalli agnidēvaṅge tējōvatipuramaṁ nirmisidanu
viśvādhikamahārudranu.
Dakṣiṇadiśābhāgadalli yamadēvaṅge
sinhāvatiya puramaṁ nirmisidanu.
Nai'r̥tya diśābhāgadalli nai'r̥tyaṅge kr̥ṣṇavatipuramaṁ nirmisidanu
viśvādhikamahārudranu.
Paścima diśābhāgadalli varuṇaṅge jan̄janitapuramaṁ nirmisidanu.
Vāyuvyadalli vāyuviṅge gaṅgāvatiyapuramaṁ nirmisidanu
viśvādhikamahārudranu.
Uttaradeśeyalli kubēraṅge aḷakāpuramaṁ nirmisidanu.
Īśān'yadiśābhāgadalli īśān'yadēvaṅge
dhavaḷāvatipuramaṁ modalāgi
samastavāda puragaḷaṁ nirmisidanu viśvādhiyakamahārudranu.
Ā mahāmēruviṅge vaḷayākr̥tavāgi
lavaṇa ikṣu sure ghr̥ta dadhi kṣīra śud'dhajalaṅgaḷemba
saptasamudraṅgaḷaṁ nirmisidanu viśvādhikamahārudranu.
Ā samudraṅgaḷa naḍuve jambūdvīpa, plakṣadvīpa,
śukladvīpa, kuśadvīpa, śākadvīpa, śālmalīdvīpa,
puṣkaradvīpa, kraun̄cadvīpavemba
saptadvīpaṅgaḷa nirmisidanu viśvādhikamahārudranu.
Ā dvīpaṅgaḷige vaḷayākr̥tavāgi
malayajaparvata, nīlaparvata,
śvētaparvata, r̥kṣaparvata, ramyaparvata,
Uttarakuruparvata, sugandhaparvata, nirākāraparvata,
udāraparvata, maṇiśikharaparvata, ardhacandraparvata,
madhuraparvata, maṇināgaparvata, mainākaparvata,
udayādriparvata, tripurāntakaparvata, śrīrāmaparvata,
mālyavantaparvata, niṣadhaparvata, hēmakūṭaparvata,
nirācalaparvata, gandhācalaparvata,
nīlācalaparvata, mandācalaparvata, mērumandiraparvata,
śubarīśvaraparvata, kumuda'udayādri, dēvakūṭa, vindhyācala,
pavanācala, pariyācala, candrācala, dhārācala, ṣaḍulakṣmigiri,
mānasāntagiri, tamandhagiri, candragiri, nāgagiri, laghugiri,
makaragiri, drōṇagiri, anantavajragiri, kapilagiri, nīlagiri,
Paragiri, tripuragiri, sinhagiri, śrīkaṇṭhagiri, cakravāḷagiriparvata,
indragiriparvata, lōkaparvataṅgaḷu modalāda
parvataṅgaḷellavaṁ nirmisidanu viśvādhikamahārudranu.
Idakke dēśaṅgaḷāgabēkendu
pān̄cāla, barbara, matsya, magadha, maleyāḷa,
teluṅga, kaḷiṅga, kukara, koṅkaṇa, trikararāṣṭra,
śvāsini, kaṇṭharahita, kutiṣṭa, daśārṇa, kuru,
mukhasara, kausayivarṇa, āvanti, lāḷa,
mahēndra, pāṇḍya, sarvēśvara, viṣṇu,
śāntaka, turādra, magadhādra,
vidēha, magadha, draviḷa, kirānta, kuntaḷa, kāmīra, gāndhāra,
kāmbhōja, kīḷugujjara, atidr̥ṣṭa, nēpāḷa, baṅgāḷa,
Puḷindra, jāḷēndra, kalvara-inthā dēśaṅgaḷellavaṁ
nirmisidanu viśvādhikamahārudranu.
Innu bhūmiyindaṁ mēle mēghamaṇḍala modalāgi
śivāṇḍa cidbrahmāṇḍa kaḍeyāgi ellā lōkaṅgaḷaṁ nirmisi,
saptapātāḷava nirmisidanadentendaḍe:
Alli pr̥thviya keḷage śa