ಆ ಮಹಾಸದಾಶಿವತತ್ವದಲ್ಲಿ ಸದಾಶಿವನುತ್ಪತ್ಯನಾಗಿ
ಆಕಾಶಕ್ಕೆ ಅಧಿದೇವತೆಯಾಗಿಹನು.
ಆಕಾಶತತ್ವದಲ್ಲಿ ಏಕಶಿರ ದ್ವಿಭುಜ ತ್ರಿನೇತ್ರವನುಳ್ಳ
ಈಶ್ವರತತ್ವ ಉತ್ಪತ್ಯವಾಗಿ ವಾಯುವಿಂಗೆ ಅಧಿದೇವತೆಯಾಗಿಹನು.
ಆ ಈಶ್ವರತತ್ವದಲ್ಲಿ ಪಂಚಮುಖರುದ್ರನುತ್ಪತ್ಯವಾಗಿ
ಅಗ್ನಿಗೆ ಅಧಿದೇವತೆಯಾಗಿಹನು.
ಆ ಪಂಚಮುಖರುದ್ರನಲ್ಲಿ ಸಹಸ್ರಶಿರ ಸಹಸ್ರಾಕ್ಷ ಸಹಸ್ರಬಾಹು
ಸಹಸ್ರಪಾದವನುಳ್ಳ ವಿರಾಟ್‍ಪುರುಷನುತ್ಪತ್ಯವಾದನು.
ಆ ವಿರಾಟ್ಪುರುಷನಲ್ಲಿ ಏಕಶಿರ ದ್ವಿಭುಜವನುಳ್ಳ
ವಿಷ್ಣು ಉತ್ಪತ್ಯವಾಗಿ ಅಪ್ಪುವಿಗೆ ಅಧಿದೇವತೆಯಾಗಿಹನು.
ಆ ವಿಷ್ಣುವಿನಲ್ಲಿ ಚತುರ್ಮುಖಬ್ರಹ್ಮ ಉತ್ಪತ್ಯವಾಗಿ
ಪೃಥ್ವಿಗೆ ಅಧಿದೇವತೆಯಾಗಿಹನು.
ಆ ಬ್ರಹ್ಮನಲ್ಲಿ ಸರ್ವಜೀವಂಗಳುತ್ಪತ್ಯ ನೋಡಾ.
ಇದಕ್ಕೆ ಕಾಲಾಗ್ನಿರುದ್ರಸಂಹಿತಾಯಾಂ: ಶ್ರೀ ಮಹಾದೇವ ಉವಾಚ-
ಪಂಚವಕ್ತ್ರಸದಾಖ್ಯಾನಾಂ ಈಶ್ವರಶ್ಚ ಸಜಾಯತೇ |
ತಥಾ ಈಶ್ವರತತ್ವೇ ಚ ಕಾಲರುದ್ರ ಸಮುದ್ಭವಃ |
ಪಂಚವಕ್ತ್ರಃ ಮಹಾರುದ್ರ ವಿರಾಟ್ಪುರುಷ ಜಾಯತೇ |
ವಿರಾಟ್ಪುರುಷ ಮಹಾತತ್ವೇ ಆದಿ ವಿಷ್ಣುಸಮುದ್ಭವಃ |
ವಿಷ್ಣುತತ್ವಾತ್‍ಮಹಾದೇವಿ ವಿರಿಂಚಿತತ್ವಃ ಜಾಯತೇ |
ಚತುರ್ಮುಖಬ್ರಹ್ಮತತ್ವೇ ಸರ್ವಜೀವಸ್ತಥಾ|
ಇತಿ ತತ್ವೋದ್ಭವಂ ಜ್ಞಾನಂ ದುರ್ಲಭಂ ಚ ವರಾನನೇ ||''
ಇಂತೆಂದುದಾಗಿ,
ಇದಕ್ಕೆ ಆನಂದಭೈರವಿ:
ಪೃಥ್ವೀ ಬ್ರಹ್ಮಾ ಜಲಂ ವಿಷ್ಣು ಸ್ತಥಾ ರುದ್ರೋ ಹುತಾಶನಃ |
ಈಶ್ವರೋ ಪವನೋ ದೇವಾಃ ಆಕಾಶಶ್ಚ ಸದಾಶಿವಃ ||''
ಇಂತೆಂದುದಾಗಿ,
ಇದಕ್ಕೆ ಈಶ್ವರ ಉವಾಚ:
ಬ್ರಹ್ಮಾ ವಿಷ್ಣುಶ್ಚ ರುದ್ರಶ್ಚ ಈಶ್ವರಶ್ಚ ಸದಾಶಿವಃ |
ಭೂಮ್ಯಾದಿ ದೈವಮಿತ್ಯುಕ್ತಂ ಇತಿ ಭೇದಂ ವರಾನನೇ ||''
ಇತೆಂದುದಾಗಿ,
ಅಪ್ರಮಾಣ ಕೂಡಲಸಂಗಮದೇವಾ.
Art
Manuscript
Music
Courtesy:
Transliteration
Ā mahāsadāśivatatvadalli sadāśivanutpatyanāgi
ākāśakke adhidēvateyāgihanu.
Ākāśatatvadalli ēkaśira dvibhuja trinētravanuḷḷa
īśvaratatva utpatyavāgi vāyuviṅge adhidēvateyāgihanu.
Ā īśvaratatvadalli pan̄camukharudranutpatyavāgi
agnige adhidēvateyāgihanu.
Ā pan̄camukharudranalli sahasraśira sahasrākṣa sahasrabāhu
sahasrapādavanuḷḷa virāṭpuruṣanutpatyavādanu.
Ā virāṭpuruṣanalli ēkaśira dvibhujavanuḷḷa
viṣṇu utpatyavāgi appuvige adhidēvateyāgihanu.Ā viṣṇuvinalli caturmukhabrahma utpatyavāgi
pr̥thvige adhidēvateyāgihanu.
Ā brahmanalli sarvajīvaṅgaḷutpatya nōḍā.
Idakke kālāgnirudrasanhitāyāṁ: Śrī mahādēva uvāca-
pan̄cavaktrasadākhyānāṁ īśvaraśca sajāyatē |
tathā īśvaratatvē ca kālarudra samudbhavaḥ |
pan̄cavaktraḥ mahārudra virāṭpuruṣa jāyatē |
virāṭpuruṣa mahātatvē ādi viṣṇusamudbhavaḥ |
viṣṇutatvātmahādēvi virin̄citatvaḥ jāyatē |
caturmukhabrahmatatvē sarvajīvastathā|
iti tatvōdbhavaṁ jñānaṁ durlabhaṁ ca varānanē ||''
intendudāgi,
idakke ānandabhairavi:
Pr̥thvī brahmā jalaṁ viṣṇu stathā rudrō hutāśanaḥ |
īśvarō pavanō dēvāḥ ākāśaśca sadāśivaḥ ||''
intendudāgi,
idakke īśvara uvāca:
Brahmā viṣṇuśca rudraśca īśvaraśca sadāśivaḥ |
bhūmyādi daivamityuktaṁ iti bhēdaṁ varānanē ||''
itendudāgi,
apramāṇa kūḍalasaṅgamadēvā.